alex Certify
ಕನ್ನಡ ದುನಿಯಾ       Mobile App
       

Kannada Duniya

ಈಜುತ್ತಲೇ ಶಾಲೆಗೋಗುವ ಶಿಕ್ಷಕನಿಗೊಂದು ಸಲಾಂ

maxresdefault

ಶಿಕ್ಷಕ ವೃತ್ತಿ ಪವಿತ್ರವಾದದ್ದು. ಭಾವಿ ಪ್ರಜೆಗಳನ್ನು ರೂಪಿಸಬೇಕಾದ ಗುರುತರ ಜವಾಬ್ದಾರಿ ಅವರ ಮೇಲಿದ್ದು, ಕೆಲ ಶಿಕ್ಷಕರು ಇಂತಹ ಪವಿತ್ರ ವೃತ್ತಿಗೆ ಇಂದು ಕಳಂಕ ತರುತ್ತಿರುವ ಮಧ್ಯೆ ಈ ಶಿಕ್ಷಕರು ಮಾತ್ರ ವಿಭಿನ್ನವಾಗಿ ನಿಲ್ಲುತ್ತಾರೆ. ಮಕ್ಕಳಿಗೆ ಪಾಠ ಮಾಡುವ ಸಲುವಾಗಿಯೇ ಇವರು ದಿನನಿತ್ಯ 2 ಕಿ.ಮೀ. ಈಜುತ್ತಾರೆ.

ಈ ಶಿಕ್ಷಕರ ಹೆಸರು ಅಬ್ದುಲ್ ಮಲಿಕ್. ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿರುವ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣಿತ ಶಿಕ್ಷಕರಾಗಿರುವ ಅಬ್ದುಲ್ ಮಲಿಕ್, ಶಾಲೆಗೆ ನಿಗದಿತ ಸಮಯಕ್ಕೆ ತಲುಪಬೇಕೆಂಬ ಕಾರಣಕ್ಕಾಗಿ ನದಿಯ ಒಂದು ದಡದಲ್ಲಿರುವ ತಮ್ಮ ಮನೆಯಿಂದ ಮತ್ತೊಂದು ದಡದಲ್ಲಿರುವ ಶಾಲೆಗೆ ಈಜಿಕೊಂಡೇ ಹೋಗುತ್ತಾರೆ.

ಅತ್ಯಂತ ಬಡತನ ಕುಟುಂಬದ ಹಿನ್ನಲೆ ಹೊಂದಿರುವ ಮಲಿಕ್ ಅವರಿಗೆ ಬಾಲ್ಯದಿಂದಲೂ ಶಿಕ್ಷಕರಾಗಬೇಕೆಂಬ ಕನಸಿತ್ತು. ಅದಕ್ಕೆ ಪೂರಕವಾಗಿ ಅವರಿಗೆ ಶಿಕ್ಷಕ ವೃತ್ತಿ ದೊರೆತಿದ್ದು, ಆದರೆ ನದಿಯ ಮತ್ತೊಂದು ದಡದಲ್ಲಿರುವ ಶಾಲೆಗೆ ಬಸ್ ನಲ್ಲಿ ಹೋಗಿ ಬರಲು ಮೂರು ಗಂಟೆ ತಗುಲುತ್ತಿತ್ತು. ಅಲ್ಲದೇ ಇದಕ್ಕಾಗಿ ಅವರು ಎರಡು ಬಸ್ ಗಳನ್ನು ಬದಲಿಸಬೇಕಿತ್ತು.

ಒಂದೊಮ್ಮೆ ಬಸ್ ಮಿಸ್ ಆದರೆ ಮತ್ತೊಂದು ಬಸ್ ಗಾಗಿ ಗಂಟೆಗಟ್ಟಲೆ ಕಾಯಬೇಕಾಗಿತ್ತು. ಹೀಗಾಗಿ ನಿಗದಿತ ಸಮಯಕ್ಕೆ ಶಾಲೆ ತಲುಪಲು ಮಲಿಕ್ ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಸೊಂಟಕ್ಕೆ ರಬ್ಬರ್ ಟ್ಯೂಬ್ ಕಟ್ಟಿಕೊಂಡು ಒಂದು ಕೈನಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಟಿಫಿನ್ ಬಾಕ್ಸ್, ಪುಸ್ತಕಗಳನ್ನು ಇಟ್ಟುಕೊಂಡು ಮತ್ತೊಂದು ಕೈನಲ್ಲಿ ಈಜುತ್ತಾ ದಿನ ನಿತ್ಯ ಶಾಲೆ ತಲುಪುತ್ತಾರೆ. ಶಾಲೆ ಮುಗಿದ ಬಳಿಕ ಮತ್ತೆ ಈಜುತ್ತಲೇ ಮನೆ ಸೇರಿಕೊಳ್ಳುವ ಅಬ್ದುಲ್ ಮಲಿಕ್ ಅವರಿಗೆ ವಿದ್ಯಾರ್ಥಿಗಳು ‘ಟ್ಯೂಬ್ ಮಾಸ್ಟರ್’ ಎಂದೇ ಕರೆಯುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...