alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಮದುವೆ ಮನೆಯ ಮತ್ತೊಂದು ಡಾನ್ಸ್

naina-batra-dance-performance_650x400_41488368640

ಮದುವೆಗಳಲ್ಲಿ ನಡೆಯೋ ಸಂಗೀತ ಸಮಾರಂಭ ತುಂಬಾನೇ ಸ್ಪೆಷಲ್. ಸ್ನೇಹಿತರು, ಸಂಬಂಧಿಕರ ಮದುವೆಯಲ್ಲಿ ಈ ಬಾರಿ ಹೊಸದೇನು ಮಾಡೋಣ ಅನ್ನೋ ಯೋಚನೆ ಎಲ್ಲರಲ್ಲೂ ಸಾಮಾನ್ಯ. ಈ ಬಾರಿ ಮದುವೆ ಸೀಸನ್ ಗಾಗಿ ಸ್ಪೆಷಲ್ ಡಾನ್ಸ್ ಒಂದನ್ನು ನೀವು ಕೂಡ ಪ್ಲಾನ್ ಮಾಡ್ಬಹುದು.

ಪಂಜಾಬಿಯ ‘ನೈ ಜಾನಾ’ ಜಾನಪದ ಹಾಡಿಗೆ ಇಬ್ಬರು ಯುವತಿಯರು ಅದ್ಭುತವಾಗಿ ಡಾನ್ಸ್ ಮಾಡಿದ್ದಾರೆ. ಈ ವಿಡಿಯೋ ಯುಟ್ಯೂಬ್, ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿದೆ. ವಧು ನೈನಾ ಬತ್ರಾ ಎಂಬಾಕೆ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾಳೆ.

ನೈನಾ ಬತ್ರಾ ಜೊತೆಗೆ ಆಕೆಯ ಸ್ನೇಹಿತೆ, ಸಂಬಂಧಿಕರು ಹಾಗೂ ಪತಿ ಅಮಿತ್ ಕನ್ವರ್ ಅವರ ಸ್ಪೆಷಲ್ ಎಂಟ್ರಿ ಕೂಡ ಈ ಡಾನ್ಸ್ ನಲ್ಲಿದೆ. ಯುಟ್ಯೂಬ್ ನಲ್ಲಿ ಈ ವಿಡಿಯೋವನ್ನು 3 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಫೇಸ್ ಬುಕ್ ನಲ್ಲಿ ಕೂಡ 3.4 ಲಕ್ಷ ಜನರು ವೀಕ್ಷಿಸಿದ್ದು, 5000 ಮಂದಿ ಇದನ್ನು ಶೇರ್ ಮಾಡಿದ್ದಾರೆ. 10,000ಕ್ಕೂ ಹೆಚ್ಚು ಕಮೆಂಟ್ ಗಳು ಬಂದಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...