alex Certify
ಕನ್ನಡ ದುನಿಯಾ       Mobile App
       

Kannada Duniya

ಅಖಿಲೇಶ್ ಪ್ರಧಾನಿಯಾದ ಮೇಲೆ ಇವನಿಗೆ ಮದುವೆ ಭಾಗ್ಯ!

pramod-7_1483446604

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಒಡೆದು ಹೋಳಾಗುತ್ತಿದೆ. ಅಪ್ಪ-ಮಗನ ಕಿತ್ತಾಟ ತಾರಕಕ್ಕೇರಿದೆ. ಹೇಗಾದ್ರೂ ಮಾಡಿ ಪಕ್ಷವನ್ನು ಉಳಿಸಿಕೊಳ್ಳಬೇಕು ಅನ್ನೋದು ಕಾರ್ಯಕರ್ತರ ಅಳಲು. 44ರ ಹರೆಯದ ಎಸ್ಪಿ ಕಾರ್ಯಕರ್ತ ಪ್ರಮೋದ್ ಯಾದವ್ ಕೂಡ ಪಕ್ಷಕ್ಕಾಗಿ ತಮ್ಮ ಜೀವ ತೇಯುತ್ತಿದ್ದಾರೆ.

ಪ್ರಮೋದ್ ಅತ್ಯಂತ ಕುಳ್ಳ ವ್ಯಕ್ತಿ, ಇವರ ಎತ್ತರ ಕೇವಲ ಎರಡು ಅಡಿ ಮಾತ್ರ. ಹಾಗಾಗಿಯೇ ಎಲ್ಲಿ ಹೋದ್ರೂ ಜನಾಕರ್ಷಣೆ ಗಿಟ್ಟಿಸಿಕೊಳ್ತಾರೆ. ವಿಶೇಷ ಏನಂದ್ರೆ ಅಖಿಲೇಶ್ ಯಾದವ್ ಭಾರತದ ಪ್ರಧಾನಿಯಾಗುವವರೆಗೂ ಪ್ರಮೋದ್ ಯಾದವ್ ಮದುವೆಯಾಗದೇ ಇರಲು ನಿರ್ಧರಿಸಿದ್ದಾರೆ. ಹಾಗಂತ ಶಪಥ ಮಾಡಿದ್ದಾರೆ.

2003ರಿಂದ್ಲೂ ಪ್ರಮೋದ್ ಸಮಾಜವಾದಿ  ಪಕ್ಷದ ಕಾರ್ಯಕರ್ತನಾಗಿ ದುಡಿಯುತ್ತಿದ್ದಾರೆ. 2012ರಲ್ಲಿ ಚುನಾವಣಾ ಪ್ರಚಾರದ ವೇಳೆ ಅವರು ಅಖಿಲೇಶ್ ಯಾದವ್ ರನ್ನು ಬೇಟಿ ಮಾಡಿದ್ರಂತೆ. ಅಖಿಲೇಶ್ ಅವರ ಸರಳ ನಡೆ ನುಡಿಯನ್ನು ಪ್ರಮೋದ್ ಮೆಚ್ಚಿಕೊಂಡಿದ್ದಾರೆ, ಅವರು ಉಳಿದೆಲ್ಲಾ ರಾಜಕಾರಣಿಗಳಿಗಿಂತ ವಿಭಿನ್ನ, ಅವರು ಪ್ರಧಾನಿ ಆಗುವವರೆಗೂ ನಾನು ಮದುವೆಯಾಗುವುದಿಲ್ಲ ಎನ್ನುತ್ತಾರೆ ಪ್ರಮೋದ್.

ನೋಡಲು ಚಿಕ್ಕ ಮಕ್ಕಳಂತೆ ಕಾಣೋ ಪ್ರಮೋದ್ ಗೆ ಈಗಾಗ್ಲೇ 44 ವರ್ಷ, ಆದ್ರೂ ತಮ್ಮ ವಯಸ್ಸಿನ ಬಗ್ಗೆ ಅವರು ತಲೆಕೆಡಿಸಿಕೊಂಡಿಲ್ಲ. ಪಕ್ಷದ ಅಧ್ಯಕ್ಷರಾಗಿ ಅಖಿಲೇಶ್ ಆಯ್ಕೆಯಾಗಿರೋದ್ರಿಂದ ಚುನಾವಣೆಯಲ್ಲಿ ಗೆಲುವು ನಿಶ್ಚಿತ ಅನ್ನೋ ವಿಶ್ವಾಸದಲ್ಲಿದ್ದಾರೆ ಪ್ರಮೋದ್. ಒಟ್ನಲ್ಲಿ ಅದ್ಯಾವಾಗ ಅಖಿಲೇಶ್ ಪ್ರಧಾನಿಯಾಗ್ತಾರೋ, ಪ್ರಮೋದ್ ಗೆ ಕಂಕಣ ಭಾಗ್ಯ ಕೂಡಿಬರತ್ತೋ ಕಾಲವೇ ಉತ್ತರಿಸಬೇಕು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...