alex Certify
ಕನ್ನಡ ದುನಿಯಾ       Mobile App
       

Kannada Duniya

ಜಾಲತಾಣದಲ್ಲಿ ವೈರಲ್ ಆಗಿದೆ ಈ ಹಳೇ ಫೋಟೋ

ಸಾಮಾಜಿಕ ಜಾಲತಾಣಗಳು ಸಾರ್ವಜನಿಕ ಜೀವನದಲ್ಲಿ ಇಂದು ಬಹು ಮುಖ್ಯ ಪಾತ್ರ ವಹಿಸುತ್ತಿವೆ. ಮಾಧ್ಯಮಗಳನ್ನೂ ಮೀರಿಸುವಂತೆ ಸಾಮಾಜಿಕ ಜಾಲತಾಣಗಳು ಕಾರ್ಯ ನಿರ್ವಹಿಸುತ್ತಿವೆ. ಜಾಲತಾಣಗಳಲ್ಲಿ ಸಕ್ರಿಯರಾಗಿರುವವರು ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಸಾಮಾಜಿಕ ಜಾಲತಾಣಗಳು ಸೂಕ್ತ ವೇದಿಕೆಯಾಗಿವೆ.

ಇದೀಗ 1976 ರಲ್ಲಿ ಸೂಪರ್ ಹಿಟ್ ಆಗಿದ್ದ ಬಾಲಿವುಡ್ ಚಿತ್ರ ‘ನಾಗಿನ್’ ನ ದೃಶ್ಯದ ಚಿತ್ರವೊಂದು ವೈರಲ್ ಆಗಿದ್ದು, ನೆಟ್ಟಿಗರು ಈ ಫೋಟೋವನ್ನು ತಮ್ಮ ಮನಸ್ಸಿನ ಅನಿಸಿಕೆಗಳನ್ನು ಹಂಚಿಕೊಳ್ಳಲು ತರಹೇವಾರಿ ಕಮೆಂಟ್ ಮಾಡಿದ್ದಾರೆ.

ತಮಗನಿಸಿದ ಅನಿಸಿಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲು ಈ ಫೋಟೋವನ್ನು ಬಳಸಿಕೊಂಡಿದ್ದು, ಒಬ್ಬರು ರಾತ್ರಿ ವೇಳೆ ನನ್ನ ಮೊಬೈಲ್ ರಿಂಗ್ ಆದಾಗ ಕುಟುಂಬದವರ ರಿಯಾಕ್ಷನ್ ಎಂದಿದ್ದರೆ, ಮತ್ತೊಬ್ಬರು ಹಾಸ್ಟೆಲ್ ನಲ್ಲಿ ಬಡಿಸಲಾದ ಮಟರ್ ಪನ್ನೀರ್ ನಲ್ಲಿ ಪನ್ನೀರ್ ಹುಡುಕಲಾಗುತ್ತಿದೆ ಎಂದಿದ್ದಾರೆ.

ಒಬ್ಬರು ಗುಜರಾತ್ ಚುನಾವಣೆಯಲ್ಲಿ ಮತಕ್ಕಾಗಿ ಆಮ್ ಆದ್ಮಿ ಪಾರ್ಟಿ ಹುಡುಕುತ್ತಿದೆ ಎಂದಿದ್ದರೆ, ಮತ್ತೊಬ್ಬರು ಹಿಂದೂ ಹಬ್ಬಗಳ ಆಚರಣೆಯಲ್ಲಿ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶದ ಕುರಿತು ಹುಡುಕಾಟ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಹೀಗೆ ಬಾಲಿವುಡ್ ಚಿತ್ರದ ಈ ಫೋಟೋವನ್ನು ನೆಟ್ಟಿಗರು ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಬಳಸಿಕೊಂಡಿದ್ದು, ಅದೀಗ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...