alex Certify
ಕನ್ನಡ ದುನಿಯಾ       Mobile App
       

Kannada Duniya

ದೇವಸ್ಥಾನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಶ್ಲೀಲ ಡಾನ್ಸ್

ಧಾರ್ಮಿಕ ಸಮ್ಮೇಳನವೊಂದರಲ್ಲಿ ಅಶ್ಲೀಲ ನೃತ್ಯ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದ್ದು, ಜನರು ನೃತ್ಯ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಘಟನೆ ನಡೆದಿರುವುದು ರಾಜಸ್ತಾನದ ಭರತ್ಪುರ ಜಿಲ್ಲೆಯ ಕಮನ್ ಎಂಬಲ್ಲಿ. ಪ್ರಸಿದ್ಧ ಭೋಜನ ಥಾಲಿ ಮೇಳ ಆಗಸ್ಟ್ 23-28ರವರೆಗೆ ನಡೆದಿದೆ. ಮೇಳದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯುವತಿಯೊಬ್ಬಳು ಮಡಿಕೆ ಹಿಡಿದು ಡಾನ್ಸ್ ಮಾಡಿದ್ದಾಳೆ. ಆಗಾಗ ಮಡಿಕೆಯಲ್ಲಿದ್ದ ನೀರನ್ನು ಮೈ ಮೇಲೆ ಹಾಕಿಕೊಂಡಿದ್ದಾಳೆ. ಯುವತಿಯ ಅಶ್ಲೀಲ ನೃತ್ಯ ನೆರೆದಿದ್ದವರಲ್ಲಿ ಕೆಲವರು ಮುಜುಗರಕ್ಕೊಳಗಾಗುವಂತೆ ಮಾಡಿದೆ.

ದೇವಸ್ಥಾನದಲ್ಲಿ ಈ ನೃತ್ಯ ಮಾಡಲಾಗಿದೆ. ನೃತ್ಯಕ್ಕೆ ಯಾರೂ ಅಡ್ಡಿಪಡಿಸಲಿಲ್ಲ. ವಿಶೇಷವೆಂದ್ರೆ ಇಲ್ಲಿನ ಪುರಸಭೆ ಈ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿದ್ದರು ಎನ್ನಲಾಗಿದೆ. ಪುರಸಭೆ ಅಧ್ಯಕ್ಷರು ಹಾಗೂ ರಾಜ್ಯದ ಸಿಎಂ ಇಬ್ಬರು ಮಹಿಳೆಯರು. ಆದ್ರೂ ಇಂತ ನೃತ್ಯಕ್ಕೆ ಒಪ್ಪಿಗೆ ಹೇಗೆ ಸಿಗ್ತು ಎಂಬ ಪ್ರಶ್ನೆ ಕಾಡಲು ಶುರುವಾಗಿದೆ. ಈವರೆಗೂ ಯಾವುದೇ ತನಿಖೆ ನಡೆದಿಲ್ಲ. ಫೋಟೋ ವೈರಲ್ ಆಗಿದ್ದು, ಬಿಸಿಬಿಸಿ ಚರ್ಚೆಯಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...