alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿ ಪ್ರೇರಣೆಯಿಂದ ತಯಾರಾಯ್ತು ವಿಶ್ವದ ಅತ್ಯಂತ ಚಿಕ್ಕ ಕೋಟ್

ಮೂರು ಇಂಚಿನ ಶರ್ಟ್ ತಯಾರಿಸಿದ ವ್ಯಕ್ತಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸನ್ಮಾನ ಮಾಡಿದ್ದರು. ಇದ್ರಿಂದ ಪ್ರೇರಿತನಾದ ವ್ಯಕ್ತಿಯೊಬ್ಬ ಹೊಸ ಪ್ರಯತ್ನಕ್ಕೆ ಕೈ ಹಾಕಿ ಯಶಸ್ವಿಯಾಗಿದ್ದಾನೆ. ಅತಿ ಸಣ್ಣ ಕೋಟ್ ತಯಾರಿಸಿದ್ದಾನೆ. ಸುಮಾರು 11 ದಿನಗಳ ಪ್ರಯತ್ನದ ನಂತ್ರ ಧರ್ಮೇಂದ್ರ 5 ಸೆಂಟಿಮೀಟರ್ ನ ಕೋಟ್ ತಯಾರಿಸಿದ್ದಾನೆ.

ಸಹಜ ಕೋಟ್ ನಂತೆಯೇ ಧರ್ಮೇಂದ್ರ ಈ ಸಣ್ಣ ಕೋಟ್ ತಯಾರಿಸಿದ್ದಾನೆ. ಜೋದ್ಪುರದ ಬಾಡ್ಮೇರ್ ನಿವಾಸಿ ಧರ್ಮೇಂದ್ರ, ಪ್ರಧಾನ ಮಂತ್ರಿ ವ್ಯಕ್ತಿಯೊಬ್ಬರಿಗೆ ಸನ್ಮಾನ ಮಾಡುತ್ತಿರುವುದನ್ನು ನೋಡಿದ್ದ. ಇದ್ರಿಂದ ಪ್ರೇರಿತನಾಗಿ ಕೋಟ್ ತಯಾರಿಸಿದ್ದಾನೆ. ವಿಶ್ವದ ಅತ್ಯಂತ ಚಿಕ್ಕ ಕೋಟ್ ಇದು ಎಂದು ಧರ್ಮೇಂದ್ರ ಹೇಳಿದ್ದಾನೆ.

ಕೋಟ್ ತಯಾರಿಸಲು 2 ಇಂಚಿನ ಲಿನೆನ್ ಹಾಗೂ 11 ನಂಬರ್ ಸೂಜಿ ಬಳಸಿ ಕೋಟ್ ತಯಾರಿಸಿದ್ದಾನೆ. ಮಸುಕಾದ ಹಳದಿ ಬಣ್ಣದ ಕೋಟ್ ನೋಡಲು ತುಂಬಾ ಸುಂದರವಾಗಿ ಕಾಣುತ್ತದೆ. ಎರಡು ಬಟನ್ ಇರುವ ಈ ಕೋಟ್ ತಯಾರಿಸಲು ಧರ್ಮೇಂದ್ರ ತುಂಬಾ ಕಷ್ಟಪಟ್ಟಿದ್ದನಂತೆ. ಕೋಟ್ ಗೆ ವಿಶೇಷ ವಿನ್ಯಾಸ ಕೂಡ ಮಾಡಿದ್ದಾನೆ. ರಾಜಸ್ತಾನ್ ಬುಕ್ ಆಫ್ ರೆಕಾರ್ಡ್ ನಲ್ಲಿ ಈ ಕೋಟ್ ಸ್ಥಾನ ಪಡೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...