alex Certify
ಕನ್ನಡ ದುನಿಯಾ       Mobile App
       

Kannada Duniya

ಮನಕಲಕುವಂತಿದೆ ಬ್ಯಾಂಕ್ ಎದುರು ನಡೆದ ಈ ದೃಶ್ಯ

bank-ajja

ನವದೆಹಲಿ: ನೋಟ್ ಬ್ಯಾನ್ ಆದ ಬಳಿಕ, ಹಣ ಸಿಗದೇ ಜನಸಾಮಾನ್ಯರು ಸಂಕಷ್ಟದಲ್ಲಿದ್ದಾರೆ. ತಿಂಗಳಾದ ನಂತರವೂ ಜನರ ಬವಣೆ ಬಗೆಹರಿದಿಲ್ಲ.

ದೇಶದಲ್ಲಿ ಬ್ಯಾಂಕ್, ಎ.ಟಿ.ಎಂ. ಬಳಿಯಲ್ಲೇ ಅನೇಕ ಮಂದಿ ಸಾವನ್ನಪ್ಪಿದ್ದಾರೆ. ಸಾಮಾನ್ಯ ಜನರ ಸಂಕಷ್ಟದ ಮತ್ತೊಂದು ನಿದರ್ಶನ ಇಲ್ಲಿದೆ ನೋಡಿ. ಗುರ್ ಗಾಂವ್ ನ ನ್ಯೂ ಕಾಲೋನಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆ ಎದುರು ವೃದ್ಧನೊಬ್ಬ ಕಣ್ಣೀರಿಟ್ಟ ದೃಶ್ಯ ಮನಕಲಕುವಂತಿದೆ.

ಹಣ ಪಡೆಯಲು ವೃದ್ಧರೊಬ್ಬರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ವಯಸ್ಸಾಗಿದ್ದ ಕಾರಣ ಅವರು ನಿಲ್ಲದೇ ಅರೆಕ್ಷಣ ಕುಳಿತಿದ್ದು, ಸರತಿ ಸಾಲಿನಲ್ಲಿ ಹಿಂದುಳಿದಿದ್ದಾರೆ. ಅವರ ಸೀನಿಯಾರಿಟಿ ಮಿಸ್ ಆಗಿದ್ದು, ಸಾಲಿನಲ್ಲಿದ್ದವರು ಅವರನ್ನು ಸೇರಿಸಿಕೊಂಡಿಲ್ಲ.

ಇದರಿಂದ ಕಂಗಾಲಾದ ವೃದ್ಧ ಕಣ್ಣೀರಿಟ್ಟಿದ್ದಾರೆ. ನೋಟ್ ಬ್ಯಾನ್ ಬಳಿಕ ಹಣ ಸಿಗದೇ ಎಷ್ಟೋ ಮಂದಿ ಮಕ್ಕಳ ಮದುವೆಯನ್ನೇ ಮುಂದೂಡಿದ್ದಾರೆ. ರೋಗಿಗಳು ಸಾವನ್ನಪ್ಪಿದ್ದಾರೆ.

ಈ ವೃದ್ಧ ಸರತಿ ಸಾಲು ಮಿಸ್ ಆಗಿದ್ದಕ್ಕೆ ಅಳುತ್ತಿದ್ದ ದೃಶ್ಯ ಮನಕಲಕುವಂತಿದ್ದು, ಇದನ್ನು ಫೋಟೋ ಜರ್ನಲಿಸ್ಟ್ ಪ್ರವೀಣ್ ಕುಮಾರ್ ಸೆರೆ ಹಿಡಿದಿದ್ದಾರೆ.

ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯಲ್ಲಿ ಚಿತ್ರ ಪ್ರಕಟವಾಗಿದೆ. ಪ್ರಧಾನಿ ನರೇಂದ್ರ ಮೋದಿ ಜನ ಸಾಮಾನ್ಯರ ಸಂಕಷ್ಟ ಕೆಲವೇ ದಿನಗಳಲ್ಲಿ ಬಗೆಹರಿಯಲಿದೆ. ಅಳುವುದು ಈಗ ಶ್ರೀಮಂತರ ಸರದಿ ಎಂದೆಲ್ಲಾ ನೋಟ್ ಬ್ಯಾನ್ ಮಾಡಿದ್ದ ಸಂದರ್ಭದಲ್ಲಿ ಹೇಳಿದ್ದರು.

ಪ್ರವೀಣ್ ಕುಮಾರ್, ಅಳುವುದು ಶ್ರೀಮಂತರ ಸರದಿ ಎಂದು ಕ್ಯಾಪ್ಷನ್ ಕೊಟ್ಟು ಈ ವೃದ್ಧ ಅಳುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ವೈರಲ್ ಆಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...