alex Certify
ಕನ್ನಡ ದುನಿಯಾ       Mobile App
       

Kannada Duniya

ಮಡಿದ ಮಗನ ನೆನಪಿನಲ್ಲಿ ಈ ತಂದೆ ಮಾಡುತ್ತಿದ್ದಾರೆ ಸ್ತುತ್ಯಾರ್ಹ ಕಾರ್ಯ

pot1 6_1442826284_1443871492

‘ಪುತ್ರ ಶೋಕಂ ನಿರಂತರಂ’ ಎನ್ನುತ್ತಾರೆ. ಅಪಘಾತದಲ್ಲಿ ತಮ್ಮ ಪುತ್ರನನ್ನು ಕಳೆದುಕೊಂಡ ತಂದೆಯೊಬ್ಬರು ನೋವಿನಲ್ಲೂ ಮಾಡುತ್ತಿರುವ ಈ ಕಾರ್ಯ ನಿಜಕ್ಕೂ ಎಲ್ಲರ ಕಣ್ತೆರೆಸುವಂತದ್ದು.

ಮುಂಬೈನ ದಾದಾರಾವ್ ಬಿಲೋರೆ ಎಂಬವರ ಪುತ್ರ 16 ವರ್ಷದ ಪ್ರಕಾಶ್ ಕಳೆದ ವರ್ಷದ ಜುಲೈನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ. ಅತ್ಯಂತ ಬುದ್ದಿವಂತ ವಿದ್ಯಾರ್ಥಿಯಾಗಿದ್ದ ಪ್ರಕಾಶ್, ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರವೇಶಾತಿ ಪಡೆದುಕೊಂಡು ತಮ್ಮ ಸಂಬಂಧಿ ರಾಮ್ ಎಂಬವರ ಜೊತೆ ಬೈಕಿನಲ್ಲಿ ಬರುತ್ತಿದ್ದ ವೇಳೆ ಈ ಅಪಘಾತ ನಡೆದಿತ್ತು.

ಕಾಮಗಾರಿಯೊಂದಕ್ಕಾಗಿ ರಸ್ತೆ ಅಗೆದಿದ್ದ ಗುತ್ತಿಗೆದಾರ ಆ ಸ್ಥಳದಲ್ಲಿ ಯಾವುದೇ ಫಲಕ ಹಾಕಿರಲಿಲ್ಲ. ಮುಂಬೈ ಮಹಾನಗರ ಪಾಲಿಕೆಯೂ ಈ ಕುರಿತು ನಿರ್ಲಕ್ಷ್ಯ ವಹಿಸಿತ್ತು. ರಾಮ್ ಅವರ ಬೈಕ್ ಏಕಾಏಕಿ ಆಳವಾದ ಈ ಗುಂಡಿಗೆ ಇಳಿದ ವೇಳೆ ಹಿಂಬದಿ ಕುಳಿತಿದ್ದ ಪ್ರಕಾಶ್ ಮೇಲೆ ಹಾರಿ ಮುಖ ಅಡಿಯಾಗಿ ನೆಲಕ್ಕೆ ಬಿದ್ದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದ. ರಾಮ್ ಅವರಿಗೂ ತೀವ್ರವಾದ ಗಾಯಗಳಾಗಿತ್ತು.

ಈ ಅಪಘಾತದಲ್ಲಿ ತಮ್ಮ ಮಗನನ್ನು ಕಳೆದುಕೊಂಡ 46 ವರ್ಷದ ದಾದಾರಾವ್ ಪಾಲಿಕೆ ನಿರ್ಲಕ್ಷ್ಯದ ವಿರುದ್ದ ತೀವ್ರ ಹೋರಾಟವನ್ನೇ ನಡೆಸಿದ್ದು, ಇದರ ಪರಿಣಾಮ ಗುತ್ತಿಗೆದಾರ ಹಾಗೂ ಪಾಲಿಕೆ ಎಂಜಿನಿಯರ್ ಮೇಲೆ ಮೊಕದ್ದಮೆ ದಾಖಲಾಗಿದೆ. ಇಷ್ಟೇ ಅಲ್ಲ ದಾದಾರಾವ್ ತಮ್ಮ ಮಗನಿಗೊದಗಿದ ಸ್ಥಿತಿ ಇನ್ನಾರಿಗೂ ಬರಬಾರದೆಂಬ ಕಾರಣಕ್ಕೆ ರಸ್ತೆಯಲ್ಲಿನ ಹೊಂಡಗಳನ್ನು ಸ್ವತಃ ತಾವೇ ಮುಚ್ಚುತ್ತಾರೆ. ತರಕಾರಿ ವ್ಯಾಪಾರಿಯಾಗಿರುವ ದಾದಾರಾವ್ ಬಿಡುವಿನ ವೇಳೆಯಲ್ಲಿ ಈ ಕಾರ್ಯ ಮಾಡುತ್ತಿದ್ದು, ಅವರೊಂದಿಗೆ ಈಗ ಸುತ್ತಮುತ್ತಲಿನ ನಿವಾಸಿಗಳು ಕೈಗೂಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...