alex Certify
ಕನ್ನಡ ದುನಿಯಾ       Mobile App
       

Kannada Duniya

ಈಜಲು ತೆರಳಿದ್ದ ಐವರು ಯುವಕರು ನೀರುಪಾಲು

beach

ಗುಜರಾತ್ ನ ಬೀಚ್ ನಲ್ಲಿ ಐವರು ಯುವಕರ ಮೃತದೇಹ ಪತ್ತೆಯಾಗಿದೆ. ಸೂರತ್ ನಿಂದ 40 ಕಿಮೀ ದೂರದಲ್ಲಿರುವ ಬೀಚ್ ಇದು. ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ನಿನ್ನೆ ರಜಾ ಇದ್ದಿದ್ರಿಂದ ಐವರೂ ಸೂರತ್ ನಿಂದ ಉಭ್ರಾತ್ ಬೀಚ್ ಗೆ ಬಂದಿದ್ರು.

ಮೃತಪಟ್ಟ ಐವರು ಕೂಡ 17 ರಿಂದ 24 ವರ್ಷದೊಳಗಿನ ಯುವಕರು. ಬೀಚ್ ನಲ್ಲಿ ಮೋಜು ಮಾಡುತ್ತ ಸಮುದ್ರಕ್ಕೆ ಇಳಿದಿದ್ದಾರೆ. ಆಳ ಸಮುದ್ರಕ್ಕೆ ತೆರಳದಂತೆ ಸ್ಥಳೀಯರು ಎಚ್ಚರಿಸಿದ್ರೂ ಕ್ಯಾರೇ ಅಂದಿಲ್ಲ.

ಈಜುತ್ತ ಈಜುತ್ತ ಬಹುದೂರಕ್ಕೆ ಸಾಗಿದ್ದ ಯುವಕರು, ಅಲೆಗಳ ಸೆಳೆತಕ್ಕೆ ಸಿಕ್ಕು ಕೊಚ್ಚಿ ಹೋಗಿದ್ದಾರೆ. ಜನರ ಕಣ್ಣೆದುರಲ್ಲೇ ಈ ದುರಂತ ಸಂಭವಿಸಿದೆ. ಸ್ಥಳಕ್ಕೆ ಬಂದ ರಕ್ಷಣಾ ಪಡೆಯ ಸಿಬ್ಬಂದಿ ಶವಗಳಿಗಾಗಿ ಹುಡುಕಾಟ ನಡೆಸಿದ್ರು. ಇಂದು ಐವರ ಮೃತದೇಹಗಳು ಪತ್ತೆಯಾಗಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...