alex Certify
ಕನ್ನಡ ದುನಿಯಾ       Mobile App
       

Kannada Duniya

ಇದೇ ಕಾರಣಕ್ಕೆ ಹೆಚ್ಚಾಗಲಿದೆ ರಾಜ್ಯ ಸಭೆಯ ಹಿರಿಮೆ

ಈ ಬಾರಿಯ ಮಳೆಗಾಲದ ಅಧಿವೇಶನ ತುಂಬಾನೇ ಸ್ಪೆಷಲ್ ಆಗಿರಲಿದೆ. ಜುಲೈ 18 ರಿಂದ ಆರಂಭವಾಗಲಿರುವ ಮಳೆಗಾಲದ ಅಧಿವೇಶನದಲ್ಲಿ 22 ಭಾಷೆಗಳಲ್ಲಿ ರಾಜ್ಯಸಭಾ ಸದಸ್ಯರು ಪ್ರಸ್ತಾವನೆಗಳನ್ನ ಸಲ್ಲಿಸೋಕೆ, ಚರ್ಚೆ ನಡೆಸೋಕೆ ಅನುಮತಿ ನೀಡಲಾಗಿದೆ. ರಾಜ್ಯ ಸಭೆಯ ಸಭಾಪತಿ ವೆಂಕಯ್ಯ ನಾಯ್ಡು ಈ ಅವಕಾಶವನ್ನು ರಾಜ್ಯಸಭಾ ಸದಸ್ಯರಿಗೆ ಕಲ್ಪಿಸಿದ್ದಾರೆ.

ಸಂವಿಧಾನದ 8ನೇ ಪರಿಚ್ಛೇದದ ಅಡಿಯಲ್ಲಿ ಸಭಾಸದರಿಗೆ ಈ ಅವಕಾಶವನ್ನ ಕಲ್ಪಿಸಲಾಗಿದೆ. ಡೋಂಗ್ರಿ, ಕಾಶ್ಮೀರಿ, ಕೊಂಕಣಿ, ಶಾಂತಲಿ ಮತ್ತು ಸಿಂಧಿ ಭಾಷೆಗಳನ್ನ ಮಾತನಾಡೋದಕ್ಕೂ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅನುಮತಿ ನೀಡಿದ್ದಾರೆ. ಭಾವನೆಗಳನ್ನ ವ್ಯಕ್ತಪಡಿಸೋಕೆ ಮಾತೃಭಾಷೆಗಿಂತ ಅತ್ಯುತ್ತಮವಾದ ಮತ್ತೊಂದು ಮಾಧ್ಯಮವಿಲ್ಲ ಅಂತ ಉಪರಾಷ್ಟ್ರಪತಿ ಅಭಿಪ್ರಾಯಪಟ್ಟಿದ್ದಾರೆ.

ಈ ಮೊದಲು 12 ಭಾಷೆಗಳನ್ನ ರಾಜ್ಯಸಭೆಯಲ್ಲಿ ಮಾತನಾಡುವ ಅವಕಾಶವಿತ್ತು. ಈಗ ಸಂಸತ್ ನ ಉಭಯ ಸದನಗಳಲ್ಲೂ 22 ಭಾಷೆಗಳಿಗೆ ಅದನ್ನು ವಿಸ್ತರಿಸುವ ಸಾಧ್ಯತೆ ಇದೆ. ಇದಕ್ಕಾಗಿ ಆಯಾ ಭಾಷೆಗಳ ವಿವಿಯಿಂದ ಸಹಾಯ ಪಡೆಯುವಂತೆ ಸದಸ್ಯರಿಗೆ ಸೂಚಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...