alex Certify
ಕನ್ನಡ ದುನಿಯಾ       Mobile App
       

Kannada Duniya

ಮಲ್ಯಗೆ ಜಾಮೀನುದಾರನಾಗಿರುವ ಮನಮೋಹನ್ ಸಿಂಗ್ ಗೆ ಫಜೀತಿ

manmohan singhಫಿಲಿಬಿತ್ ನ ಖಜುರಿಯಾ ನವಿರಾಮ್ ಗ್ರಾಮದ ಮನಮೋಹನ್ ಸಿಂಗ್ ತನಗಿದ್ದ 8 ಎಕರೆ ಜಮೀನಿನಲ್ಲಿ ಬೆಳೆ ಬೆಳೆದು ನೆಮ್ಮದಿಯಿಂದಿದ್ದ. ಆದರೆ ಆತನ ನೆಮ್ಮದಿಗೆ ಈಗ ಭಂಗ ಬಂದಿದೆ. ಇದಕ್ಕೆ ಕಾರಣವಾಗಿರುವುದು ವಿವಿಧ ಬ್ಯಾಂಕುಗಳಿಂದ ಸಾವಿರಾರು ಕೋಟಿ ರೂ. ಸಾಲ ಮಾಡಿ ವಿದೇಶಕ್ಕೆ ಪಲಾಯನಗೈದಿರುವ ಮದ್ಯ ದೊರೆ ವಿಜಯ್ ಮಲ್ಯ ಎಂಬುದು ಅಚ್ಚರಿಯಾದರೂ ಸತ್ಯ.

ಹೌದು. ವಿಜಯ್ ಮಲ್ಯ ಮಾಡಿರುವ ಸಾಲಕ್ಕೆ ಮನಮೋಹನ್ ಸಿಂಗ್ ಜಾಮೀನುದಾರನೆಂದು ಗುರುತಿಸಿರುವ ಬ್ಯಾಂಕುಗಳು, ಆತನ ಖಾತೆಯನ್ನು ಸ್ಥಗಿತಗೊಳಿಸಿವೆ. ಎರಡು ಬ್ಯಾಂಕ್ ಖಾತೆಗಳನ್ನು ಮನಮೋಹನ್ ಸಿಂಗ್ ಹೊಂದಿದ್ದು, ಇದೀಗ ಈ ಖಾತೆಗಳನ್ನು ಸ್ಥಗಿತಗೊಳಿಸಿರುವ ಕಾರಣ ಸರ್ಕಾರದ ಯಾವುದೇ ಸೌಲಭ್ಯ ಪಡೆಯಲು ಪರದಾಡುವಂತಾಗಿದೆ. ಮುಂಬೈನ ಬ್ಯಾಂಕ್ ಆಫ್ ಬರೋಡಾ ಕಛೇರಿಯಿಂದ ಸ್ಥಳೀಯ ಬ್ಯಾಂಕ್ ಗೆ ಸೂಚನೆ ಬಂದಿರುವ ಹಿನ್ನಲೆಯಲ್ಲಿ ಮನಮೋಹನ್ ಸಿಂಗ್ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ.

ಅಚ್ಚರಿಯ ಸಂಗತಿಯೆಂದರೆ ಮನಮೋಹನ್ ಸಿಂಗ್, ವಿಜಯ್ ಮಲ್ಯರನ್ನು ಇದುವರೆಗೂ ಮುಖಾಮುಖಿ ಭೇಟಿಯಾಗಿಲ್ಲ. ಕೇವಲ ಟಿವಿ ಹಾಗೂ ಪತ್ರಿಕೆಗಳಲ್ಲಿ ಅವರನ್ನು ನೋಡಿದ್ದಾನೆ. ಅಷ್ಟೇ ಯಾಕೆ ಜೀವಮಾನದಲ್ಲೇ ಆತ ಮುಂಬೈಗೆ ಭೇಟಿಯನ್ನೇ ನೀಡಿಲ್ಲ. ಆದರೂ ಬ್ಯಾಂಕ್, ಈತ ಮಲ್ಯರಿಗೆ ಜಾಮೀನು ನೀಡಿರುವನೆಂದು ಹೇಗೆ ಗುರುತಿಸಿದೆಯೋ ತಿಳಿಯುತ್ತಿಲ್ಲ. ಸಬ್ಸಿಡಿ ಸೇರಿದಂತೆ ಸರ್ಕಾರದ ಹಲವು ಸೌಲಭ್ಯಗಳು ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗುತ್ತಿರುವುದರಿಂದ ಖಾತೆಯಿದ್ದರೂ ಮನಮೋಹನ್ ಸಿಂಗ್, ಈ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗದೆ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...