alex Certify
ಕನ್ನಡ ದುನಿಯಾ       Mobile App
       

Kannada Duniya

ವಿಚಿತ್ರ ಆದ್ರೂ ಸತ್ಯ! ಬೇಸಿಗೆಯಲ್ಲಿ ನಡುಗ್ತಾನೆ, ಚಳಿಗಾಲದಲ್ಲಿ ಬೆವರ್ತಾನೆ ಈತ!!

ಹರಿಯಾಣದ ಮಹೇಂದ್ರಘರ್ ಹಳ್ಳಿಯ ನಿವಾಸಿ ಸಂತಾರಾಮ್ ಅವರ ಶರೀರ ವಾತಾವರಣಕ್ಕೆ ವಿರುದ್ಧವಾಗಿ ವರ್ತಿಸುತ್ತದೆ. ಅಂದರೆ ಇವರಿಗೆ ಚಳಿಗಾಲದಲ್ಲಿ ತುಂಬ ಸೆಕೆ ಆಗುತ್ತದೆ ಮತ್ತು ಬೇಸಿಗೆಯಲ್ಲಿ ಚಳಿಯೆನಿಸುತ್ತದೆ!

ಶೀತದ ವಾತಾವರಣದಲ್ಲಿ ಎಲ್ಲರೂ ಸ್ವೆಟರ್, ಶಾಲ್, ರಜಾಯಿ ಮುಂತಾದವುಗಳ ಮೊರೆ ಹೋಗುತ್ತಾರೆ. ಆದರೆ ಸಂತಾರಾಮ್ ಅವರಿಗೆ ಚಳಿಗಾಲದಲ್ಲಿ ವಿಪರೀತ ಸೆಕೆ. ಚುಮು ಚುಮು ಚಳಿಯಲ್ಲಿ ಇವರು ಸೆಕೆ ತಡೆಯಲಾರದೆ ಐಸ್ ಮೇಲೆ ಕೂರುತ್ತಾರೆ. ದಿನಕ್ಕೆ 3-4 ಬಾರಿ ತಣ್ಣನೆಯ ನೀರಿನಲ್ಲಿ ಸ್ನಾನ ಮಾಡುತ್ತಾರೆ. ಚಳಿಗಾಲದಲ್ಲಿ ಐಸ್ ಪೀಸ್ ತಿನ್ನದೇ ಇದ್ದಲ್ಲಿ ಇವರಿಗೆ ನಿದ್ದೆಯೇ ಬರುವುದಿಲ್ಲ.

ಬೇಸಿಗೆ ಬಂತೆಂದರೆ ಸಾಮಾನ್ಯವಾಗಿ ಎಲ್ಲರೂ ಫ್ಯಾನ್, ಕೂಲರ್, ಎಸಿ ಗಳ ಮೇಲೆ ಹೆಚ್ಚು ಅವಲಂಬಿತರಾದರೆ ಸಂತಾರಾಮ್ ಅವರು ಬೆಂಕಿಯೆದುರು ಕೂರುತ್ತಾರೆ. ಬೇಸಿಗೆಯಲ್ಲಿ ಬೆಳಿಗ್ಗೆ 10 ಗಂಟೆ ಆಯಿತೆಂದರೆ ಇವರಿಗೆ ಎಲ್ಲಿಲ್ಲದ ಚಳಿ ಶುರುವಾಗುತ್ತಂತೆ. ಇವರ ಈ ದೇಹದ ಸ್ಥಿತಿಯಿಂದ ಎಲ್ಲರೂ ಇವರನ್ನು ತಮಾಷೆಗಾಗಿ ‘ವಾತಾವರಣ ವಿಭಾಗ’ ಎಂದು ಕರೆಯುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...