alex Certify
ಕನ್ನಡ ದುನಿಯಾ       Mobile App
       

Kannada Duniya

ತಮ್ಮ ಮದುವೆಯಲ್ಲಿ ಇವರು ಬಾಯ್ಬಿಟ್ಟು ಕೇಳಿದ್ದಾರೆ ಗಿಫ್ಟ್, ಏನದು ಗೊತ್ತಾ?

ಪ್ರತಿಯೊಬ್ಬರ ಜೀವನದಲ್ಲೂ ಮದುವೆಯೆಂಬುದು ಮಹತ್ವದ ಘಟ್ಟ. ಈ ಗಳಿಗೆಯನ್ನು ಸ್ಮರಣೀಯವಾಗಿಸಲು ಕೆಲವರು ವಿಭಿನ್ನವಾಗಿ ಮದುವೆಯಾಗುತ್ತಾರೆ. ಆದರೆ ಈ ದಂಪತಿ ತಮ್ಮ ಮದುವೆಯನ್ನು ಸಾಮಾಜಿಕ ಉದ್ದೇಶವೊಂದರ ಸಾಕಾರಕ್ಕಾಗಿ ಬಳಸಿಕೊಳ್ಳುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ಮಹಾರಾಷ್ಟ್ರದ ಅಮರ್ ಕಮಲಾಕರ್ ಹಾಗೂ ರಾಣಿ ದಂಪತಿಗಳು ತಮ್ಮ ಮದುವೆಗೆ ಆಗಮಿಸುವ ಅತಿಥಿಗಳಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ನೀಡುವಂತೆ ವಿನಂತಿಸಿದ್ದಾರೆ. ಆ ಪುಸ್ತಕಗಳನ್ನು ಬಳಸಿಕೊಂಡು ಲೈಬ್ರರಿ ರೂಪಿಸುವುದು ಇವರ ಉದ್ದೇಶ.

ಸಾಮಾಜಿಕ ಕಾರ್ಯಕರ್ತರಾಗಿರುವ ಅಮರ್ ಕಮಲಾಕರ್, ರವಿಶಂಕರ್ ಗುರೂಜಿಯವರ ‘ಆರ್ಟ್ ಆಫ್ ಲಿವಿಂಗ್’ ಸದಸ್ಯರೂ ಹೌದು. ಇನ್ನು ರಾಣಿ, ಪುಣೆ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದ ಪ್ರೊಫೆಸರ್. ಅಮರ್ ಕಮಲಾಕರ್ ತಮ್ಮ ಚಿಂತನೆಯನ್ನು ಭಾವಿಪತ್ನಿ ಮುಂದಿಟ್ಟಾಗ ಅವರೂ ಇದಕ್ಕೆ ಸಮ್ಮತಿಸಿದ್ದಾರೆ. ಈಗ ದಂಪತಿಗಳು ತಮಗೆ ಉಡುಗೊರೆಯಾಗಿ ಬಂದ ಪುಸ್ತಕಗಳಿಂದ ಅಹಮದ್ ನಗರದಲ್ಲಿ ಲೈಬ್ರರಿ ಸ್ಥಾಪಿಸಲು ನಿರ್ಧರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...