alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ವಾತಂತ್ರ್ಯ ಬಂದು 70 ವರ್ಷಗಳ ಬಳಿಕ ಈ ಹಳ್ಳಿಗೆ ಬಂದಿದೆ ವಿದ್ಯುತ್

ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 70 ವರ್ಷಗಳಾದರೂ ಇನ್ನೂ ಕೆಲ ಕುಗ್ರಾಮಗಳು ಮೂಲಭೂತ ಸೌಕರ್ಯದಿಂದ ವಂಚಿತವಾಗಿವೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಹಳ್ಳಿಗಳ ಜನರು ಸಾಮಾನ್ಯ ಬದುಕಿಗಾಗಿ ಪರದಾಡುವಂತಾಗಿದೆ.

ಇದಕ್ಕೆ ತಾಜಾ ಉದಾಹರಣೆಯೆಂದರೆ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಬುಲಮ್ಗಾಂವ್ ಬಳಿಯ ಈ ಕುಗ್ರಾಮ. ನಗರ ಪ್ರದೇಶದಿಂದ 112 ಕಿ.ಮೀ. ದೂರದಲ್ಲಿರುವ ಈ ಹಳ್ಳಿ ವಿದ್ಯುತ್ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿತ್ತು. ಕಡೆಗೂ ಈ ಹಳ್ಳಿಗೆ ಈಗ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.

ಪ್ರಧಾನಮಂತ್ರಿ ಸಹಜ್ ಬಿಜ್ಲಿ ಹರ್ ಘರ್ ಯೋಜನಾ-ಸೌಭಾಗ್ಯ ಅಡಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು, ಸ್ವಾತಂತ್ರ್ಯ ಲಭಿಸಿದ 70 ವರ್ಷಗಳ ಬಳಿಕ ಗ್ರಾಮದ 105 ಮನೆಗಳಲ್ಲಿ ಬೆಳಕು ಕಂಡಿದೆ. ಈ ಹಳ್ಳಿಯ ಜನಸಂಖ್ಯೆ ಕೇವಲ 500 ಇದ್ದು, ಶಾಲೆಗೆ ಹೋಗುವ ಮಕ್ಕಳು ಕತ್ತಲು ಆವರಿಸುತ್ತಿದ್ದಂತೆಯೇ ತಮ್ಮ ಓದನ್ನು ನಿಲ್ಲಿಸಬೇಕಾಗಿತ್ತು.  ಈಗ ತಮ್ಮ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿರುವುದಕ್ಕೆ ಹರ್ಷಗೊಂಡಿರುವ ಗ್ರಾಮಸ್ಥರು ಇನ್ನಿತರೆ ಸೌಕರ್ಯಗಳನ್ನೂ ಕಲ್ಪಿಸಿಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...