alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಹೊಟೇಲ್ ನಲ್ಲಿ ಎಷ್ಟು ಬೇಕಾದ್ರೂ ತಿನ್ನಿ….ನಿಮ್ಮಿಷ್ಟದಂತೆ ಹಣ ನೀಡಿ

ಹೊಟೇಲ್ ಗೆ ಹೋದಾಗ ಎಲ್ಲರ ಕಣ್ಣು ಬೀಳೋದು ರೆಸ್ಟೋರೆಂಟ್ ಮೆನು ಮೇಲೆ. ಮೆನುನಲ್ಲಿರುವ ಬೆಲೆ ನೋಡಿ ಆಹಾರ ಆರ್ಡರ್ ಮಾಡುವವರಿದ್ದಾರೆ. ಕಡಿಮೆ ಬೆಲೆಗೆ ಉತ್ತಮ ಆಹಾರ ಸಿಗಲಿ ಅಂತಾ ಎಲ್ಲರೂ ಬಯಸ್ತಾರೆ. ಆಹಾರ ತಿಂದ ನಂತ್ರ ಬಿಲ್ ನೋಡಿ ಹಣಕೊಟ್ಟು ಬರ್ತೆವೆ. ಆದ್ರೆ ಕೇರಳದ ಹೊಟೇಲ್ ಒಂದು ಎಲ್ಲರ ಗಮನ ಸೆಳೆಯುತ್ತಿದೆ.

ಈ ಹೊಟೇಲ್ ನಲ್ಲಿ ನಿಮ್ಮಷ್ಟಕ್ಕೆ ಬೇಕಾಗುವಷ್ಟು ಆಹಾರ ಸೇವನೆ ಮಾಡಬಹುದು. ಹಾಗೆ ನಿಮಗಿಷ್ಟವಾಗುವಷ್ಟು ಹಣ ಕೊಟ್ಟು ಬರಬಹುದು. ಯಸ್. ಚೆರ್ತಾಲ ರಾಷ್ಟ್ರೀಯ ಹೆದ್ದಾರಿ ಪಾಧಿರಾಪ್ಪಲ್ಲಿ ಬಳಿ ಇಂಥ ರೆಸ್ಟೋರೆಂಟ್ ಒಂದು ಶುರುವಾಗಿದೆ. ಈ ರೆಸ್ಟೋರೆಂಟ್ ನಲ್ಲಿ ನಿಮಗಿಷ್ಟವಾಗುವಷ್ಟು ಆಹಾರ ತಿನ್ನಬಹುದು. ಹಾಗೆ ನಿಮಗಿಷ್ಟವಾಗುವಷ್ಟು ಬಿಲ್ ನೀಡಿ ಬರಬಹುದು. ಈ ರೆಸ್ಟೋರೆಂಟ್ ನಲ್ಲಿ ನಗದು ಗುಮಾಸ್ತನಿಲ್ಲವಂತೆ. ಎಂದೂ ಹೊಟೇಲ್ ನವರು ಹಣ ಕೇಳುವುದಿಲ್ಲವಂತೆ.

ಕೇರಳ ಹಣಕಾಸು ಸಚಿವ ಥಾಮಸ್ ಈ ಹೊಟೇಲ್ ಬಗ್ಗೆ ಫೇಸ್ಬುಕ್ ನಲ್ಲಿ ಮಾಹಿತಿ ನೀಡಿದ್ದಾರೆ. ರೆಸ್ಟೋರೆಂಟ್ ನಲ್ಲಿರುವ ಹಣದ ಡಬ್ಬದಲ್ಲಿ ನೀವು ನಿಮಗಿಷ್ಟವಾಗುವಷ್ಟು ಹಣವನ್ನು ಹಾಕಬಹುದು. ಒಂದು ವೇಳೆ ಡಬ್ಬದಲ್ಲಿ ಹಣ ಹಾಕಿಲ್ಲವೆಂದ್ರೆ ಯಾರೂ ನಿಮ್ಮನ್ನು ಪ್ರಶ್ನೆ ಮಾಡುವುದಿಲ್ಲ. ಈ ರೆಸ್ಟೋರೆಂಟ್ ನಲ್ಲಿ 2000 ಮಂದಿಗೆ ಆಹಾರ ತಯಾರಿಸಲಾಗುತ್ತದೆ. ಇದಕ್ಕೆ 11.25 ಲಕ್ಷ ರೂಪಾಯಿ ಖರ್ಚಾಗುತ್ತದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...