alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಹಾರದಲ್ಲಿ ಹೀಗಿರುತ್ತೆ ವಿದ್ಯಾರ್ಥಿಗಳ ಪರೀಕ್ಷೆ

ಇದು ಬಿಹಾರದ ವೀರ್ ಕನ್ವರ್ ಸಿಂಗ್ ಕಾಲೇಜಿನಲ್ಲಿ ಕಂಡು ಬಂದ ದೃಶ್ಯ. ಬಿಹಾರದ ಪರೀಕ್ಷಾ ವ್ಯವಸ್ಥೆಯನ್ನು ಈ ವೈರಲ್ ಫೋಟೋ ಬಹಿರಂಗಪಡಿಸಿದೆ. ಇಲ್ಲಿ ಶಿಕ್ಷಣ ಇಲಾಖೆ ನಡೆಸುವ ಪರೀಕ್ಷೆಗಳಲ್ಲೆಲ್ಲ ನಕಲು ಸರ್ವೇ ಸಾಮಾನ್ಯವಾಗಿಬಿಟ್ಟಿದೆ.

ಮಹಾರಾಜಾ ಕಾಲೇಜು ಹಾಗೂ ಪೈಹರಿ ಜಿ ಕಾಲೇಜಿನ ಬಿಎ ಎರಡನೇ ವರ್ಷದ ವಿದ್ಯಾರ್ಥಿಗಳೆಲ್ಲ ಒಂದೇ ಕಡೆ ನೆಲದ ಮೇಲೆ ಕುಳಿತು ಪುಸ್ತಕಗಳನ್ನು ಇಟ್ಟುಕೊಂಡೇ ಭೌತಶಾಸ್ತ್ರ ಪರೀಕ್ಷೆ ಬರೆದಿದ್ದಾರೆ. ಪರಸ್ಪರ ಮಾತನಾಡಿಕೊಂಡು ಕಾಪಿ ಹೊಡೆದಿದ್ದಾರೆ.

ಪರೀಕ್ಷಾ ಮೇಲ್ವಿಚಾರಕರ ಸಮ್ಮುಖದಲ್ಲೇ ವಿದ್ಯಾರ್ಥಿಗಳು ಬಿಂದಾಸ್ ಆಗಿ ನಕಲು ಮಾಡಿದ್ದಾರೆ. ಯೂನಿವರ್ಸಿಟಿಯ ವೈಸ್ ಚಾನ್ಸಿಲರ್ ಈ ಬಗ್ಗೆ ವರದಿ ಕೇಳಿದ್ದು, ಸೆಪ್ಟೆಂಬರ್ 20ರಂದು ಮರು ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.

ಕಾಲೇಜಿನಲ್ಲಿ 2300 ವಿದ್ಯಾರ್ಥಿಗಳು ಕುಳಿತು ಪರೀಕ್ಷೆ ಬರೆಯಲು ಅವಕಾಶವಿದೆಯಂತೆ. ಆದ್ರೆ 4400 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಸ್ಥಳಾವಕಾಶದ ಕೊರತೆಯಿಂದ ವರಾಂಡದಲ್ಲಿ ಕೂರಿಸಲಾಗಿತ್ತು ಅಂತಾ ಕಾಲೇಜು ಪ್ರಾಂಶುಪಾಲರು ಸಮರ್ಥಿಸಿಕೊಂಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...