alex Certify
ಕನ್ನಡ ದುನಿಯಾ       Mobile App
       

Kannada Duniya

ಬಳಸಿದ ಸ್ಯಾನಿಟರಿ ಪ್ಯಾಡ್ ಕಸಕ್ಕೆಸೆಯುವ ಮುನ್ನ ಈ ಸ್ಟೋರಿ ಓದಿ

sanitary-waste_220217-102400

ಹುಡುಗರು ಕೊಳಕಾಗಿರ್ತಾರೆ ಎಂದು ಅನೇಕರು ಹೇಳುವುದುಂಟು. ಬಹುಷ್ಯ ಹೀಗೆ ಹೇಳೋರು ಹುಡುಗಿಯರ ಶೌಚಾಲಯ ಬಳಸದೆ ಇರೋರು ಎಂದ್ರೆ ತಪ್ಪಾಗಲಾರದು. ಯಾಕೆಂದ್ರೆ ಹುಡುಗಿಯರ ಶೌಚಾಲಯ ಕೂಡ ಸ್ವಚ್ಛವಾಗಿರೋದಿಲ್ಲ. ಕಚೇರಿಗಳಲ್ಲಿ ಹುಡುಗಿಯರು ಶೌಚಾಲಯದಲ್ಲಿ ಕೊಳಕು ಮಾಡಿದ್ರೆ ನಾವು ಕೂಗೋದು ಕ್ಲೀನ್ ಮಾಡುವ ಆಂಟಿಯರನ್ನು.

ನಮಗೆ ಹೇಸಿಗೆ ಎನ್ನಿಸುವುದನ್ನು ಅವರು ಹೇಗೆ ಕ್ಲೀನ್ ಮಾಡ್ತಾರೆ ಎನ್ನುವ ಬಗ್ಗೆ ಒಮ್ಮೆ ಕೂಡ ನಾವು ಯೋಚನೆ ಮಾಡೋದಿಲ್ಲ. ಬಳಸಿದ ಸ್ಯಾನಿಟರಿ ಪ್ಯಾಡ್, ಬೇಬಿ ನ್ಯಾಪ್ಕಿನ್ ಗಳನ್ನು ಕೂಡ ನಾವು ಹಾಗೆ ಕಸಕ್ಕೆ ಹಾಕುತ್ತೇವೆ. ಅದನ್ನು ಬೇರೆ ಮಾಡೋದು ಎಷ್ಟು ಕಷ್ಟ ಎನ್ನುವ ಬಗ್ಗೆ ಒಮ್ಮೆ ಕೂಡ ಯೋಚನೆ ಮಾಡೋದಿಲ್ಲ.

ಬೇರೆಯವರು ಬಳಸಿದ ಪ್ಯಾಡ್ ಗಳನ್ನು ಬೇರ್ಪಡಿಸೋದು, ಅದನ್ನು ಮುಟ್ಟೋದು ಎಷ್ಟು ಹಿಂಸೆ ಎಂಬುದನ್ನು ಮಹಿಳೆಯೊಬ್ಬರು ಹೇಳಿದ್ದಾರೆ. ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ವಚ್ಛ ಭಾರತ ಅಭಿಯಾನದಡಿ ಮಾಡಲಾಗಿರುವ ಈ ವಿಡಿಯೋವನ್ನೊಮ್ಮೆ ನೀವೂ ನೋಡಿ, ಅವರು ಹೇಳುವ ನಿಯಮಗಳನ್ನು ಪಾಲಿಸಿ ಸ್ವಚ್ಛತೆ ಜೊತೆಗೆ ಕಸ ತೆಗೆಯುವವರ ಕೆಲಸಕ್ಕೂ ಗೌರವ ನೀಡಿ.

 

 

Subscribe Newsletter

Get latest updates on your inbox...

Opinion Poll

  • ಕರಾವಳಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯ ಸರ್ಕಾರ ವಿಫಲವಾಗಿದೆಯೇ..?

    View Results

    Loading ... Loading ...