alex Certify
ಕನ್ನಡ ದುನಿಯಾ       Mobile App
       

Kannada Duniya

‘ಸಲಿಂಗ ಕಾಮ’ದ ಕುರಿತ ತೀರ್ಪು ಹೊರ ಬೀಳುತ್ತಿದ್ದಂತೆ ಗೂಗಲ್, ಫೇಸ್ಬುಕ್ ಮಾಡಿದ್ದೇನು…?

ಸೆಪ್ಟೆಂಬರ್ 6 ರಂದು ಸುಪ್ರೀಂ ಕೋರ್ಟ್ ನಿಂದ ಹೊರಬಿದ್ದ ಪರಸ್ಪರ ಸಮ್ಮತಿಯ ಸಲಿಂಗ ಕಾಮ ಅಪರಾಧವಲ್ಲ ಅನ್ನೋ ತೀರ್ಪಿಗೆ ದೇಶದಾದ್ಯಂತ ಸಂತಸ ವ್ಯಕ್ತವಾಗಿದೆ.

ಈ ಮೂಲಕ ಸಮ್ಮತಿಯ ಸಲಿಂಗ ಕಾಮವನ್ನು ಒಪ್ಪಿಕೊಂಡ ವಿಶ್ವದ 26ನೇ ರಾಷ್ಟ್ರವಾಗಿ ಭಾರತ ಗುರುತಿಸಿಕೊಂಡಿದೆ. ಈ ತೀರ್ಪು ಪ್ರಕಟವಾಗ್ತಿದ್ದ ಹಾಗೆ ಗೂಗಲ್ ಮತ್ತು ಫೇಸ್ ಬುಕ್ ಕೂಡ ತಮ್ಮ ಜಾಲತಾಣಗಳಲ್ಲಿ ಆದೇಶವನ್ನು ಗೌರವಿಸುವ ಹಾಗೆ ನಡೆದುಕೊಂಡಿದೆ.

ಫೇಸ್ಬುಕ್ ಮತ್ತು ಗೂಗಲ್ ತನ್ನ ಡೂಡಲ್ ಮೂಲಕ ತೀರ್ಪಿಗೆ ಗೌರವವನ್ನು ಸೂಚಿಸಿವೆ. ಫೇಸ್ಬುಕ್ ತನ್ನ ಲೋಗೋದಲ್ಲಿ ಸಲಿಂಗ ಕಾಮದ ಸಂಕೇತವಾದಂತ ಕಾಮಬಿಲ್ಲಿನ ಬಾವುಟದ ಬಣ್ಣಗಳನ್ನ ಅಳವಡಿಸಿಕೊಂಡಿದೆ. ಭಾರತದ ಫೇಸ್ಬುಕ್ ಪುಟಗಳಲ್ಲಿ ಮಾತ್ರ ಈ ರೀತಿಯ ಬದಲಾವಣೆ ಕಾಣಿಸಿಕೊಂಡಿದೆ.

ಇನ್ನು ಗೂಗಲ್ ಕೂಡ ತೀರ್ಪು ಪ್ರಕಟವಾಗ್ತಿದ್ದ ಹಾಗೆ ಬಾವುಟದ ಚಿಹ್ನೆಯನ್ನ ತನ್ನ ಡೂಡಲ್ ಆಗಿ ಬಳಕೆ ಮಾಡಿದೆ. ಕಾಮನಬಿಲ್ಲಿನ ಪತಾಕೆಯನ್ನ ತನ್ನ ಸರ್ಚ್ ಎಂಜಿನ್ ನಲ್ಲಿ ಎದ್ದು ಕಾಣುವಂತೆ ವಿನ್ಯಾಸ ಮಾಡಿದೆ. ಆ ಮೂಲಕ ಸಲಿಂಗ ಲೆಸ್ಬಿಯನ್, ಗೇ, ಬೈ ಸೆಕ್ಸುಯಲ್ಸ್, ಮತ್ತು ಲಿಂಗ ಪರಿವರ್ತನೆಗೆ ಒಳಪಟ್ಟವರ ಖುಷಿಯನ್ನ ಇಮ್ಮಡಿಗೊಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...