alex Certify
ಕನ್ನಡ ದುನಿಯಾ       Mobile App
       

Kannada Duniya

ಭುವನೇಶ್ವರದಲ್ಲಿದ್ದಾರೆ ದೇಶದ ಮೊದಲ ತೃತೀಯ ಲಿಂಗಿ ಕ್ಯಾಬ್ ಡ್ರೈವರ್

ಭುವನೇಶ್ವರ: ಮಾನವ ಸಂಪನ್ಮೂಲ ವಿಷಯದಲ್ಲಿ ಎಂಬಿಎ ಪದವೀಧರರಾಗಿರುವ ಭುವನೇಶ್ವರದ ಮೇಘನಾ ಸಾಹು ಈಗ ದೇಶದ ಮೊದಲ ತೃತೀಯಲಿಂಗಿ ಕ್ಯಾಬ್ ಡ್ರೈವರ್ ಎನಿಸಿಕೊಂಡಿದ್ದಾರೆ.

ಮೂವತ್ತು ವರ್ಷದ ಸಾಹು ಅವರು ಕ್ಯಾಬ್ ಸೇವೆ ನೀಡುವ ಓಲಾ ಸೇವೆಗೆ ತೊಡಗಿಸಿಕೊಂಡಿದ್ದು, ತೃತೀಯ ಲಿಂಗಿ ಎಂಬ ಕಾರಣಕ್ಕೆ ಎಲ್ಲೆಡೆ ತಿರಸ್ಕೃತಗೊಂಡು ಉದ್ಯೋಗವೂ ಸಿಗದೇ ಕ್ಯಾಬ್ ಡ್ರೈವಿಂಗ್ ಉದ್ಯೋಗಕ್ಕೆ ಬಂದಿದ್ದಾರೆಂದು ತಿಳಿದುಬಂದಿದೆ.

ತೃತೀಯ ಲಿಂಗಿಗಳು ಉದ್ಯೋಗ ಪಡೆದುಕೊಳ್ಳುವುದು ಕಷ್ಟ. ಡ್ರೈವಿಂಗ್ ತರಬೇತಿ, ಲೈಸೆನ್ಸ್ ಪಡೆದುಕೊಳ್ಳುವುದೂ ಕಷ್ಟವೇ. ತೃತೀಯ ಲಿಂಗಿಗಳಿಗೂ ಸುಪ್ರಿಂಕೋರ್ಟ್ ಮಾನ್ಯತೆ ನೀಡಿದ್ದರಿಂದ ಅನುಕೂಲವಾಗಿದೆ ಎಂದು ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಅವರ ಕ್ಯಾಬ್ ನಲ್ಲಿ ಬರುವ ಮಹಿಳಾ ಪ್ರಯಾಣಿಕರಿಗೆ ಸುರಕ್ಷಿತ ಭಾವನೆ ಮೂಡಿದೆ ಎಂದು ಹೇಳಿಕೊಳ್ಳುವ ಸಾಹು, ಈವರೆಗೆ ಪುರುಷ ಪ್ರಯಾಣಿಕರಿಂದ ಯಾವುದೇ ಸಮಸ್ಯೆಯಾಗಿಲ್ಲ ಎಂದು ತಿಳಿಸಿದ್ದಾರೆ. ಹಾಗೆಯೇ ಇನ್ನಷ್ಟು ತೃತೀಯ ಲಿಂಗಿಗಳು ಡ್ರೈವಿಂಗ್ ಕೆಲಸಕ್ಕೆ ಸೇರಿಕೊಂಡು ವೃತ್ತಿ ಜೀವನ ನಡೆಸಬಹುದೆಂದು ಸಲಹೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...