alex Certify
ಕನ್ನಡ ದುನಿಯಾ       Mobile App
       

Kannada Duniya

100 ಗ್ರಾಂ ಮೊಸರಿಗೆ 972 ರೂ….!

this-is-how-an-rti-activist-unearthed-big-central-railway-catering-scamನಂಬಿದ್ರೆ ನಂಬಿ ಬಿಟ್ರೆ ಬಿಡಿ! 100 ಗ್ರಾಂ ಮೊಸರಿಗೆ 972 ರೂ., ರೀಫೈನ್ಡ್ ಆಯಿಲ್ ಪ್ರತಿ ಲೀಟರ್ ಗೆ 1,241 ರೂ. ಇಷ್ಟು ಮೊತ್ತ ನೀಡಿ ಖರೀದಿಸಿರುವುದು ಸೆಂಟ್ರಲ್ ರೈಲ್ವೇ ಇಲಾಖೆ. ಮುಂಬೈನ ಸಾಮಾಜಿಕ ಕಾರ್ಯಕರ್ತ ಅಜಯ್ ಬೋಸ್ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ಸೆಂಟ್ರಲ್ ರೈಲ್ವೇ ಇಲಾಖೆ ನೀಡಿರುವ ಉತ್ತರ ಇದು.

ರೈಲ್ವೇ ಇಲಾಖೆ ಪ್ರತಿ ವರ್ಷ ಕೋಟ್ಯಾಂತರ ರೂ. ನಷ್ಟ ಅನುಭವಿಸುತ್ತಿರುವ ಹಿನ್ನಲೆಯಲ್ಲಿ ಅಜಯ್ ಬೋಸ್, ಕೇಟರಿಂಗ್ ವಿಭಾಗದಲ್ಲಿ ಖರೀದಿಯಾಗುತ್ತಿರುವ ಆಹಾರ ವಸ್ತುಗಳ ಕುರಿತು ಮಾಹಿತಿ ಕೋರಿ ಜುಲೈ, 2016 ರಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಅವರು ಕೋರಿದ್ದ ಮಾಹಿತಿಗೆ ವಿವರ ಒದಗಿಸಲು ರೈಲ್ವೇ ಇಲಾಖೆ ಅಧಿಕಾರಿಗಳು ಮೀನಾಮೇಷ ಎಣಿಸಿದ್ದರು.

ಪಟ್ಟು ಬಿಡದ ಅಜಯ್ ಬೋಸ್ ಮೇಲ್ಮನವಿ ಸಲ್ಲಿಸಿದ್ದು, ಅದಕ್ಕೆ ಈಗ ಮಾಹಿತಿ ನೀಡಲಾಗಿದೆ. ಇದರ ಪ್ರಕಾರ ರೈಲ್ವೇ ಕೇಟರಿಂಗ್ ವಿಭಾಗದಲ್ಲಿ ಭಾರೀ ಗೋಲ್ಮಾಲ್ ನಡೆದಿರುವ ಸಂಶಯ ವ್ಯಕ್ತವಾಗುತ್ತಿದೆ. ಸೆಂಟ್ರಲ್ ರೈಲ್ವೇ ಇಲಾಖೆ ನೀಡಿರುವ ಮಾಹಿತಿಯನುಸಾರ ಕೆ.ಜಿ. ಮೊಸರಿಗೆ 9,720 ರೂ. ಪಾವತಿಸಲಾಗಿದೆ. ಮಾಧ್ಯಮಗಳಲ್ಲಿ ಈ ವಿಚಾರ ಬಹಿರಂಗಗೊಂಡ ಬಳಿಕ ಅದನ್ನು ನಿರಾಕರಿಸಿರುವ ರೈಲ್ವೇ ಇಲಾಖೆ ಅಧಿಕಾರಿಗಳು, ಟೈಪಿಂಗ್ ಮಿಸ್ಟೇಕ್ ನಿಂದ ಮಾಹಿತಿ ನೀಡುವಲ್ಲಿ ತಪ್ಪಾಗಿದೆ ಎಂಬ ಸಮಜಾಯಿಷಿ ನೀಡಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುವುದು ಎಂಬ ಮಾಹಿತಿ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...