alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳಾ ಪೈಲಟ್ ಕಾರಣಕ್ಕೆ ಉಳಿದಿದೆ ನೂರಾರು ಮಂದಿಯ ಪ್ರಾಣ

ಮುಂಬೈ ವಿಮಾನ ನಿಲ್ದಾಣದಲ್ಲಿ ಫೆ.7 ರಂದು ಸಂಭವಿಸಬಹುದಾಗಿದ್ದ ಭಾರೀ ದುರಂತವೊಂದು ತಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆಗಸದಲ್ಲಿ 2 ವಿಮಾನಗಳು ಪರಸ್ಪರ ಡಿಕ್ಕಿ ಹೊಡೆಯುವುದು ಸ್ವಲ್ಪದರಲ್ಲೇ ತಪ್ಪಿದ್ದು, 300 ಕ್ಕೂ ಅಧಿಕ ಮಂದಿ ಅಪಾಯದಿಂದ ಪಾರಾಗಿದ್ದಾರೆ.

ಮುಂಬೈನಿಂದ ಭೂಪಾಲ್ ಗೆ ತೆರಳುತ್ತಿದ್ದ ಏರ್ ಇಂಡಿಯಾ ಏರ್ ಬಸ್ A319 ಹಾಗೂ ಪುಣೆಗೆ ತೆರಳುತ್ತಿದ್ದ ವಿಸ್ತಾರ A230 ವಿಮಾನ 27 ಸಾವಿರ ಅಡಿ ಎತ್ತರದಲ್ಲಿದ್ದ ವೇಳೆ ಡಿಕ್ಕಿ ಹೊಡೆಯುವ ಸಾಧ್ಯತೆಯಿದ್ದು,  ಉಭಯ ವಿಮಾನಗಳ ಮಹಿಳಾ ಪೈಲಟ್ ಗಳು ತೋರಿದ ಸಮಯ ಪ್ರಜ್ಞೆಯಿಂದಾಗಿ ಘೋರ ದುರಂತವೊಂದು ತಪ್ಪಿದೆ.

29,000 ಅಡಿ ಎತ್ತರದಲ್ಲಿ ಹಾರಾಟ ನಡೆಸಬೇಕಿದ್ದ ವಿಸ್ತಾರ ಏರ್ ಲೈನ್ಸ್ ವಿಮಾನ 27,100 ಅಡಿಗೆ ಇಳಿದಿದ್ದು, ಈ ಪ್ರಮಾದಕ್ಕೆ ಕಾರಣ ಎನ್ನಲಾಗಿದ್ದು, ಇದನ್ನು ತಕ್ಷಣ ಗಮನಿಸಿದ ಏರ್ ಇಂಡಿಯಾ ವಿಮಾನದ ಕ್ಯಾಪ್ಟನ್ ಅನುಪಮಾ ಕೊಹ್ಲಿ ಸಮಯಪ್ರಜ್ಞೆ ಮೆರೆದು ಅಪಾಯವನ್ನು ತಪ್ಪಿಸಿದ್ದಾರೆ. ಸುಮಾರು 20 ವರ್ಷಗಳ ಅನುಭವವುಳ್ಳ ಕ್ಯಾಪ್ಟನ್ ಅನುಪಮಾ ಅವರ ಕಾರ್ಯಕ್ಕೆ ಈಗ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...