alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಭಾಷೆಯನ್ನು ಬರೆಯಲು ಬರುವವರು ಕೇವಲ 100 ಮಂದಿ ಮಾತ್ರ…!

ಭಾರತದ ವಿವಿಧ ರಾಜ್ಯಗಳಲ್ಲಿ ಈ ಭಾಷೆಯಲ್ಲಿ 2 ಮಿಲಿಯನ್ ಜನರು ಮಾತನಾಡುತ್ತಾರೆ. ಆದ್ರೆ ಇದನ್ನು ಬರೆಯಲು ಬರುವುದು ಕೇವಲ 100 ಜನರಿಗೆ ಮಾತ್ರ. ಈ ಭಾಷೆಯ ಹೆಸರು ಗೊಂಡಿ. ಮಧ್ಯಪ್ರದೇಶ, ಗುಜರಾತ್, ತೆಲಂಗಾಣ, ಮಹಾರಾಷ್ಟ್ರ, ಛತ್ತೀಸ್ ಗಢ ಮತ್ತು ಆಂಧ್ರಪ್ರದೇಶದಲ್ಲಿ ಈ ಭಾಷೆ ಬಳಕೆಯಲ್ಲಿದೆ.

ಇಷ್ಟೊಂದು ಸಂಖ್ಯೆಯಲ್ಲಿ ಗೊಂಡಿ ಭಾಷೆ ಮಾತನಾಡುವ ಜನರಿದ್ದರೂ ಇದು ಅಳಿವಿನ ಅಂಚಿನಲ್ಲಿದೆ. ಹಾಗಾಗಿ ಇದನ್ನು ಉಳಿಸಲೆಂದೇ ಗೊಂಡಿ ಡಿಕ್ಷನರಿಯೊಂದನ್ನು ಮುದ್ರಿಸಲಾಗಿದೆ. ಶುಭ್ರಾಂಶು ಚೌಧರಿ ಅವರ ನೇತೃತ್ವದಲ್ಲಿ ಡಿಕ್ಷನರಿ ತಯಾರಿಸಲಾಗಿದೆ.

ಗೊಂಡಿ ಜನರು ಹಾಗೂ ಜಗತ್ತಿನ ಇತರ ಭಾಗಗಳ ಮಧ್ಯೆ ಸಂವಹನ ಅಂತರವಿದೆ ಎನ್ನುತ್ತಾರೆ ಶುಭ್ರಾಂಶು. ಮಾವೋವಾದಿ ಪೀಡಿತ ರಾಜ್ಯಗಳ ಬುಡಕಟ್ಟು ಜನಾಂಗದವರು ಮಾತ್ರ ಈ ಭಾಷೆಯನ್ನು ಬಳಸುತ್ತಿದ್ದಾರೆ. ಶೇ.99ರಷ್ಟು ಮಾವೋಗಳು ಸಹ ಇದೇ ಭಾಷೆ ಮಾತನಾಡುತ್ತಾರಂತೆ.

ಇದೀಗ 3000 ಗೊಂಡಿ ಭಾಷೆಯ ಪದಗಳುಳ್ಳ ಪುಟ್ಟ ನಿಘಂಟನ್ನು ಸಿದ್ಧಪಡಿಸಲಾಗಿದೆ. ಇನ್ನು ಮೇಲಾದ್ರೂ ಈ ಭಾಷೆಯ ಉಳಿವಿಗೆ ಆಯಾ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರ ಸರ್ಕಾರ ಪ್ರಯತ್ನ ಪಡಬೇಕು ಅನ್ನೋ ಒತ್ತಾಯ ಸಹ ಕೇಳಿಬಂದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...