alex Certify
ಕನ್ನಡ ದುನಿಯಾ       Mobile App
       

Kannada Duniya

ಫ್ಲಿಪ್ ಕಾರ್ಟ್ ನಲ್ಲಿ ಪದವೀಧರ ಮಾರಾಟಕ್ಕೆ

akash iit 22

ದೇಶದಲ್ಲಿ ಲಕ್ಷಾಂತರ ಕೋಟಿ ರೂ. ಹೂಡಿಕೆಯಾಗುತ್ತಿದೆ. ಅತಿ ಹೆಚ್ಚಿನ ಉದ್ಯೋಗ ಅವಕಾಶಗಳು ಸಿಗುತ್ತಿವೆ ಎಂದೆಲ್ಲಾ ಹೇಳಲಾಗುತ್ತಿದೆ. ಆದರೆ, ಎಷ್ಟೋ ಮಂದಿಗೆ ಇನ್ನೂ ಉದ್ಯೋಗ ಸಿಕ್ಕಿಲ್ಲ. ಹೀಗೆ ಕೆಲಸ ಸಿಗದೇ
ನಿರಾಸೆಗೊಂಡ ಯುವಕನೊಬ್ಬ ಏನು ಮಾಡಿದ್ದಾನೆ ನೋಡಿ.

ನಿಮಗೆಲ್ಲಾ ತಿಳಿದಿರುವಂತೆ ಆನ್ ಲೈನ್ ಮಾರ್ಕೆಟ್ ನಲ್ಲಿ ವಸ್ತು, ವಾಹನ ಮೊದಲಾದವುಗಳನ್ನು ಮಾರಾಟಕ್ಕೆ ಇಟ್ಟಿರುತ್ತಾರೆ. ಕೆಲವು ತಿಂಗಳ ಹಿಂದೆ ತಮಾಷೆಗೆ ತನ್ನ ಅತ್ತೆಯನ್ನೇ ಸೊಸೆ ಮಾರಾಟಕ್ಕೆ ಇಟ್ಟಿದ್ದಳು. ಇದೀಗ
ಸತ್ಯ ಹರಿಶ್ಚಂದ್ರನನ್ನು ನೆನಪಿಸುವ ಘಟನೆಯೊಂದು ನಡೆದಿದೆ. ಪದವೀಧರನೊಬ್ಬ ಫ್ಲಿಪ್ ಕಾರ್ಟ್ ನಲ್ಲಿ ತನ್ನನ್ನೇ ಮಾರಾಟಕ್ಕೆ ಇಟ್ಟಿದ್ದಾನೆ. ಆಕಾಶ್ ನೀರಜ್ ಮಿತ್ತಲ್ ಹೆಸರಿನ ಈ ಯುವಕ ಖರಗ್ ಪುರ ಐಐಟಿಯಲ್ಲಿ ಪದವಿ
ಪಡೆದುಕೊಂಡಿದ್ದಾನೆ.

ಕೆಲಸ ಸಿಗದೇ ಬೇಸರಗೊಂಡ ಆಕಾಶ್ ತನ್ನನ್ನೇ ಮಾರಾಟಕ್ಕೆ ಇಟ್ಟಿದ್ದು, 27,60,200 ರೂ.ಗಳನ್ನು ಕನಿಷ್ಠ ದರವಾಗಿ ನಿಗದಿಪಡಿಸಿದ್ದಾನೆ. ಖರಗ್ ಪುರ ಐಐಟಿಯಲ್ಲಿ ಪ್ರಾಡೆಕ್ಟ್ ಮ್ಯಾನೇಜ್ ಮೆಂಟ್ ನಲ್ಲಿ ಪದವಿ ಪಡೆದರೂ ನನಗೆ ಉದ್ಯೋಗ ಸಿಗುತ್ತಿಲ್ಲ. ಕೆಲಸ ಪಡೆಯುವುದು ಕಷ್ಟಸಾಧ್ಯವಾಗಿರುವುದರಿಂದ ಈ ದಾರಿ ತುಳಿದಿದ್ದೇನೆ ಎಂದು ಹೇಳಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...