alex Certify
ಕನ್ನಡ ದುನಿಯಾ       Mobile App
       

Kannada Duniya

ವರನ ಪೋಷಾಕು ಧರಿಸಿ ಕುದುರೆ ಏರಿ ಬಂದ್ಲು ವಧು

ಲಿಂಗ ಸಮಾನತೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಮಹಿಳೆಯೊಬ್ಬಳು ವಿಚಿತ್ರ ಪ್ರಯತ್ನ ಮಾಡಿದ್ದಾಳೆ. ಐಐಟಿ ಪದವೀಧರೆಯಾಗಿರೋ ನೇಹಾ ಕಕ್ಕರ್ ತನ್ನ ಮದುವೆಯಲ್ಲಿ ವರನ ವೇಷ ಧರಿಸಿದ್ಲು. ಶೇರ್ವಾನಿ ತೊಟ್ಟು ಕುದುರೆ ಏರಿ ದಿಬ್ಬಣದ ಜೊತೆಗೆ ವರನ ಮನೆಗೆ ಬಂದಿದ್ದಾಳೆ.

ಸಾಮಾನ್ಯವಾಗಿ ಈ ರೀತಿ ವರ ಮಾಡುವುದು ಸಂಪ್ರದಾಯ. ಆದ್ರೆ ಹೆಣ್ಣು ಗಂಡು ಎಂಬ ಭೇದ ಭಾವ ಇರಬಾರದು ಅನ್ನೋ ಕಾರಣಕ್ಕೆ ವಧು ನೇಹಾ, ವರ ಮಾಡಬೇಕಾದ ಆಚರಣೆಯನ್ನು ತಾನೇ ಮಾಡಿದ್ದಾಳೆ. ರಾಜಸ್ತಾನದ ಜುಂಝುನು ಜಿಲ್ಲೆಯಲ್ಲಿ ವಿವಾಹ ನೆರವೇರಿದೆ.

ನೇಹಾಳ ಪ್ರಯತ್ನಕ್ಕೆ ಆಕೆಯ ಮನೆಯವರು ಕೂಡ ಸಾಥ್ ನೀಡಿರೋದು ವಿಶೇಷ. ಹೆಣ್ಣು-ಗಂಡು ಇಬ್ಬರಿಗೂ ಸಮಾನ ಅವಕಾಶ ಹಾಗೂ ಹಕ್ಕು ಸಿಗಬೇಕು ಅನ್ನೋದು ನೇಹಾಳ ವಾದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...