alex Certify
ಕನ್ನಡ ದುನಿಯಾ       Mobile App
       

Kannada Duniya

ಕೋಮು ಸಾಮರಸ್ಯಕ್ಕೆ ಅಯೋಧ್ಯೆಯಲ್ಲಿದೆ ಅತ್ಯುತ್ತಮ ಉದಾಹರಣೆ

woman_tree ayodhya

ಅಯೋಧ್ಯೆ ಎಂದ ಕೂಡಲೇ ನೆನಪಾಗುವುದು, ರಾಮಮಂದಿರ, ಬಾಬರಿ ಮಸೀದಿ ಹಾಗೂ ಕೋಮು ಗಲಭೆಗಳು. ಆದರೆ, ಅದೇ ಅಯೋಧ್ಯೆಯಲ್ಲಿ ಕೋಮು ಸೌಹಾರ್ದತೆಗೆ ಅತ್ಯುತ್ತಮ ಉದಾಹರಣೆಯಾಗಬಹುದಾದ ಸ್ಥಳವೊಂದಿದೆ.

ಅಯೋಧ್ಯೆಯಲ್ಲಿ ‘ರಾಮ್ ರಮ’ ಎನ್ನುವ ಪವಿತ್ರ ಮರವೊಂದಿದೆ. ಈ ಮರವನ್ನು ಹಿಂದೂಗಳು ಪವಿತ್ರ ಮರವೆಂದು ಪೂಜಿಸುತ್ತಾರೆ. ದಿನಾಲು ಇಲ್ಲಿಗೆ ಬರುವ ಭಕ್ತರು, ಭಕ್ತಿಯಿಂದ ನಮಿಸಿ ಪೂಜೆ ಸಲ್ಲಿಸಿ, ಹರಕೆ ತೀರಿಸುತ್ತಾರೆ. ಈ ಮರದ ಸುತ್ತಲಿನ ಪ್ರದೇಶವನ್ನು ಮುಸಲ್ಮಾನರು ಸ್ವಚ್ಛಗೊಳಿಸುತ್ತಾರೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ಮರದ ಸುತ್ತಲಿನ ಪ್ರದೇಶದಲ್ಲಿ ಹೆಚ್ಚಾಗಿ ಮುಸಲ್ಮಾನರೇ ವಾಸವಾಗಿದ್ದು, ಪ್ರತಿದಿನ ಈ ಮರದ ಸುತ್ತಲಿನ ಪ್ರದೇಶವನ್ನು ಸ್ವಚ್ಛ ಮಾಡುತ್ತಾರೆ.

ಅಯೋಧ್ಯೆಯಲ್ಲಿ ‘ರಾಮ್ ರಮ’ ಮರ ಕೋಮುಸಾಮರಸ್ಯಕ್ಕೆ ಅತ್ಯುತ್ತಮ ನಿದರ್ಶನವಾಗಿದೆ. ಇಲ್ಲಿ ನಡೆಯುವ ಉತ್ಸವದಲ್ಲಿ ಹಿಂದೂ, ಮುಸಲ್ಮಾನರು ಒಟ್ಟಿಗೆ ಪಾಲ್ಗೊಳ್ಳುತ್ತಾರೆ. ಎಲ್ಲರೂ ಒಂದಾಗಿ ಸಂಭ್ರಮದಿಂದ ಉತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಕೋಮು ಸೌಹಾರ್ದತೆಯನ್ನು ಸಾರುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...