alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ 11 ರೂ.ನಲ್ಲಿ ನಿಮ್ಮ ಪಾಪ ಕಳೆದುಕೊಳ್ಳಿ

tempddd

ಉದಯಪುರ: ಮನುಷ್ಯನೆಂದ ಮೇಲೆ ತಪ್ಪು ಮಾಡುವುದು ಸಹಜ. ಮಾಡಿದ ತಪ್ಪನ್ನು ಸರಿಪಡಿಸಿಕೊಂಡು ಮುನ್ನಡೆಯುವುದು ಮನುಷ್ಯನ ಲಕ್ಷಣ. ಕೆಲವರು, ಜೀವನದಲ್ಲಿ ಮಾಡಿದ ಪಾಪ ವಿಮೋಚನೆಗೆ ದೇವರ ಮೊರೆ ಹೋಗುತ್ತಾರೆ.

ಮಾಡಿದ ಪಾಪ ಕಳೆದುಕೊಳ್ಳಲು ದೇವರಿಗೆ ಪೂಜೆ, ಕಾಣಿಕೆ, ಹರಕೆ ತೀರಿಸುತ್ತಾರೆ. ಪವಿತ್ರ ಸ್ಥಳಗಳಿಗೆ ಭೇಟಿ ನೀಡಿ ಪುಣ್ಯಸ್ನಾನ ಮಾಡುತ್ತಾರೆ. ಈ ನಂಬಿಕೆ ಒಂದು ಕಡೆಯಾದರೆ, ನೀವು ಮಾಡಿದ ಪಾಪ ವಿಮೋಚನೆಯಾಗಿದ್ದಕ್ಕೆ ಪ್ರಮಾಣಪತ್ರ ಕೊಡುವ ಪದ್ಧತಿಯೊಂದು ರಾಜಸ್ತಾನದಲ್ಲಿದೆ. ಪ್ರತಾಪಗಢ ಜಿಲ್ಲೆಯ ಉದಯಪುರದಲ್ಲಿರುವ ಗೌತಮೇಶ್ವರ ದೇವಾಲಯದಲ್ಲಿ 11 ರೂಪಾಯಿ ಕೊಟ್ಟರೆ ನಿಮ್ಮ ಪಾಪ ವಿಮೋಚನೆಯ ಸರ್ಟಿಫಿಕೇಟ್ ಸಿಗುತ್ತದೆ.

ದೇವಾಲಯ ಸಮೀಪದ ಮಂದಾಕಿನಿ ಕುಂಡದಲ್ಲಿ ಮಿಂದು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದುಕೊಂಡ ನೀವು 11 ರೂಪಾಯಿ ಕೊಟ್ಟರೆ, ಪಾಪ ವಿಮೋಚನೆಯ ಸರ್ಟಿಫಿಕೇಟ್ ಕೊಡಲಾಗುತ್ತದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...