alex Certify
ಕನ್ನಡ ದುನಿಯಾ       Mobile App
       

Kannada Duniya

ಸಕಲ ಸೌಲಭ್ಯವಿರುವ ಈ ಶಾಲೆಗೆ ಒಬ್ಬಳೇ ವಿದ್ಯಾರ್ಥಿನಿ…!

ಹರಿಯಾಣದ ರೇವಡಿ ಜಿಲ್ಲೆಯ ಲುಖಿ ಶಾಲೆಯಲ್ಲಿ 7ನೇ ತರಗತಿ ಕಲೆಯುತ್ತಿರುವ ಕುಸುಮ ಕುಮಾರಿ ಬಾಲಕಿಗೆ, ಶಾಲೆಯ ವಾತಾವರಣ ತುಂಬ ಇಷ್ಟ. ಆದ್ರೆ, ಸ್ನೇಹಿತರು ಇಲ್ಲ ಎಂಬುದೊಂದೇ ಸಮಸ್ಯೆ. ಈ ಶಾಲೆಯಲ್ಲಿ ಕುಸುಮ ಕುಮಾರಿಗೆ ಸ್ನೇಹಿತರಾದ್ರೂ ಹೇಗೆ ಇರುತ್ತಾರೆ ಹೇಳಿ. ಏಕೆಂದ್ರೆ, ಈ ಶಾಲೆಯಲ್ಲಿ ಕಲಿಯುತ್ತಿರುವ ಏಕೈಕ ವಿದ್ಯಾರ್ಥಿನಿ ಕುಸುಮ.

ಕುಸುಮಗೆ ಕಲಿಸಲು ಒಬ್ಬ ಶಿಕ್ಷಕರು ಇದ್ದಾರೆ. ಇವರೇ, ಕುಸುಮಳ ಪ್ರಪಂಚ….ಮಾತೃಭಾಷೆ, ಆಂಗ್ಲಭಾಷೆ, ಗಣಿತ, ವಿಜ್ಞಾನ, ಸಮಾಜ ವಿಷಯಗಳಿಗೇ ಒಬ್ಬರೇ ಮೇಷ್ಟ್ರು. 2014-15 ರ ಶೈಕ್ಷಣಿಕ ವರ್ಷದಲ್ಲಿ ಈ ಶಾಲೆಯಲ್ಲಿ 17 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. 2016ರಲ್ಲಿ ಈ ಸಂಖ್ಯೆ 22ಕ್ಕೆ ಏರಿದೆ. ಆದ್ರೆ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕೇವಲ ಒಬ್ಬಳೇ ವಿದ್ಯಾರ್ಥಿ ಇಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.

ರಾಜ್ಯ ಸರ್ಕಾರ ಈ ಶಾಲೆಗೆ ಪ್ರತಿ ವರ್ಷವೂ ಸುಮಾರು 8 ಲಕ್ಷ ಹಣವನ್ನು ಖರ್ಚು ಮಾಡುತ್ತದೆ. ಆದ್ರೆ, ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಏರಿಸಲು ಕ್ರಮ ಕೈಗೊಂಡಿಲ್ಲ. ಶಿಕ್ಷಣ ಇಲಾಖೆ ಏಕೆ ಇನ್ನು ಈ ಶಾಲೆಯನ್ನು ನಡೆಸುತ್ತಿದೆ ಎಂಬ ಪ್ರಶ್ನೆ ಏಳುವುದು ಸಹಜ. ಆದ್ರೆ, ಜಿಲ್ಲಾ ಶಿಕ್ಷಣಾಧಿಕಾರಿ ತಿಳಿಸುವಂತೆ, ನಾವು ವಿದ್ಯಾರ್ಥಿನಿಗೆ ಶಾಲೆಗೆ ಬರಬೇಡಿ ಎಂದು ಹೇಳಲು ಆಗದು. ಒಂದು ವೇಳೆ ಕುಸುಮ ಬೇರೆ ಶಾಲೆಯತ್ತ ಮುಖ ಮಾಡಿದಾಗ ಈ ಬಗ್ಗೆ ಚಿಂತನೆ ನಡೆಸಲಾಗುವುದು ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...