alex Certify
ಕನ್ನಡ ದುನಿಯಾ       Mobile App
       

Kannada Duniya

ವರಮಾಲೆ ಸಮಯದಲ್ಲಿ ವಧುವಿನ ಯಡವಟ್ಟು

ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ತ್ರಿವಾ ಕೋಟ್ವಾಲ್ ಗ್ರಾಮದಲ್ಲಿ ಕೋಪಗೊಂಡ ವರನೊಬ್ಬ ವರಮಾಲೆ ಸಮಯದಲ್ಲಿ ಮದುವೆ ನಿಲ್ಲಿಸಿದ್ದಾನೆ. ರಾತ್ರಿಯಿಡಿ ವರನ ಮನವೊಲಿಕೆ ಯತ್ನ ನಡೆಸಿದ ವಧುವಿನ ಕುಟುಂಬಸ್ಥರು ನಂತ್ರ ಪೊಲೀಸರಿಗೆ ದೂರು ನೀಡಿದ್ದಾರೆ.

ವರಮಾಲೆ ವೇಳೆ ವಧು ಮಾಡಿದ ಯಡವಟ್ಟು ಮದುವೆ ನಿಲ್ಲಲು ಕಾರಣವಾಗಿದೆ. ವಧು ವರಮಾಲೆಯನ್ನು ವರನ ಕೊರಳಿಗೆ ಹಾಕುವ ಬದಲು ಎಸೆದಿದ್ದಾಳಂತೆ. ಇದು ವರನ ಕೋಪಕ್ಕೆ ಕಾರಣವಾಗಿದೆ. ಈ ಕಾರಣ ಇಟ್ಟುಕೊಂಡೇ ವರ ಮದುವೆ ನಿರಾಕರಿಸಿದ್ದಾನೆ.

ಇದೇ ವಿಚಾರಕ್ಕೆ ವರ-ವಧುವಿನ ನಡುವೆ ಗಲಾಟೆ,ಹೊಡೆದಾಟ ನಡೆದಿದೆ. ಹುಡುಗಿ ಕಡೆಯವರು ಸಾಕಷ್ಟು ಪ್ರಯತ್ನಪಟ್ಟರೂ ಯಾವುದೇ ಪ್ರಯೋಜನವಾಗಲಿಲ್ಲ. ವರನ ಕಡೆಯವರು ವರದಕ್ಷಿಣೆ ಕೇಳ್ತಿದ್ದಾರೆಂದು ವಧು ಕಡೆಯವರು ಆರೋಪ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...