alex Certify
ಕನ್ನಡ ದುನಿಯಾ       Mobile App
       

Kannada Duniya

ದುಡ್ಡು ಸಿಗದ ಈ ಸಮಯದಲ್ಲಿ ದುರದೃಷ್ಟವೂ ಅರಸಿ ಬಂತು..!

unlucky

ವರ್ಲಿಯಲ್ಲಿ ಕೀ ತಯಾರಿಸುವ ಅಂಗಡಿ ಇಟ್ಕೊಂಡಿರೋ ನಿಶಾದ್ ಹುಸೇಸ್ ಜಾಫ್ರಿ, ಹಣಕ್ಕಾಗಿ ಭಾನುವಾರ ಬ್ಯಾಂಕ್ ನಿಂದ ಬ್ಯಾಂಕ್ ಗೆ ಅಲೆದಾಡುತ್ತಲೇ ಇದ್ರು. ಜಾಫ್ರಿ ಅವರ ಪತ್ನಿಗೆ ಸ್ತನದಲ್ಲಿ ಗಡ್ಡೆ ಬೆಳೆದಿತ್ತು, ಚಿಕಿತ್ಸೆಗಾಗಿ ಅರ್ಜೆಂಟಾಗಿ 5000 ರೂಪಾಯಿ ಬೇಕು. ಶನಿವಾರ 8 ಗಂಟೆಗಳ ಕಾಲ ಕ್ಯೂನಲ್ಲಿ ನಿಂತು ಜಾಫ್ರಿ ನಿಷೇಧಗೊಂಡ ಹಳೆ ನೋಟುಗಳನ್ನು ಕೊಟ್ಟು 4000 ರೂಪಾಯಿ ಹೊಸ ನೋಟು ಪಡೆದಿದ್ದರು.

ಹಣವನ್ನು ಪತ್ನಿಯ ಹೆಸರಲ್ಲಿ ಜಮಾ ಮಾಡುವ ಆತುರದಲ್ಲಿ ಜಾಫ್ರಿ ಅವರ ಬಳಿಯಿದ್ದ 2000 ರೂಪಾಯಿ ನೋಟು ಆಕಸ್ಮಿಕವಾಗಿ ಹರಿದು ಹೋಗಿದೆ. ಎಲ್ಲಾ ಬ್ಯಾಂಕ್ ಶಾಖೆಗಳಿಗೆ ಹೋಗಿ ಕೇಳಿದ್ರು ಯಾರೊಬ್ಬರೂ ಹರಿದ ನೋಟನ್ನು ಸ್ವೀಕರಿಸಲು ಒಪ್ಪಿಲ್ಲ.

ಹರಿದ ನೋಟನ್ನು ಸ್ವೀಕರಿಸುವ ಬಗ್ಗೆ ಯಾವುದೇ ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್ ಗಳಿಗೆ ನಿರ್ದೇಶನ ಬಂದಿಲ್ಲ, ಹಾಗಾಗಿ ನೀವು ರಿಸರ್ವ್ ಬ್ಯಾಂಕ್ ನಲ್ಲೊಮ್ಮೆ ಪ್ರಯತ್ನಿಸಿ ಅಂತಾ ಸಿಬ್ಬಂದಿ ಸಲಹೆ ನೀಡಿದ್ರು. ಅವರ ಬಳಿಯಿರೋದು ಕೇವಲ 4000 ರೂಪಾಯಿ ಮಾತ್ರ, ಅದರಲ್ಲಿ 2000 ರೂಪಾಯಿಯ ನೋಟೊಂದು ಹರಿದು ಹೋಗಿದೆ.

ಹೆಂಡತಿಯ ಚಿಕಿತ್ಸೆಗೆ ಹಣ ಎಲ್ಲಿಂದ ತರಲಿ ಅನ್ನೋ ಚಿಂತೆ. ಅತ್ತ ವರ್ಲಿಯಲ್ಲಿರುವ ಅಂಗಡಿಯಲ್ಲೂ ನಯಾಪೈಸೆ ವಹಿವಾಟು ನಡೆಯುತ್ತಿಲ್ಲ. ಹಣ ಇಲ್ಲದೇ ಇರೋದ್ರಿಂದ ಅಗತ್ಯ ವಸ್ತುಗಳ ಖರೀದಿಗೆ ಹಿಂದೆ ಮುಂದೆ ಯೋಚಿಸ್ತಿರೋ ಜನರು ಹೊಸ ಕೀಲಿ ಮಾಡಿಸಲು ಬರ್ತಾರಾ ಅನ್ನೋದು ಅವರ ಪ್ರಶ್ನೆ. ಒಟ್ನಲ್ಲಿ ಕಷ್ಟಪಟ್ಟು ಇಡೀ ದಿನ ನಿಂತು 4000 ರೂಪಾಯಿ ಬದಲಾಯಿಸಿಕೊಂಡ್ರೂ ದುರಾದೃಷ್ಟ ಅವರ ಬೆನ್ನು ಬಿಟ್ಟಿಲ್ಲ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...