alex Certify
ಕನ್ನಡ ದುನಿಯಾ       Mobile App
       

Kannada Duniya

ವರ್ಷ ಪೂರ್ತಿ ಉಚಿತ ಬಿಯರ್ ಪಡೆಯಲು ಈ ಪ್ಲಾನ್ ಮಾಡಿದ್ದಾನೆ ಯುವಕ

beer

ವರ್ಷ ಪೂರ್ತಿ ಫ್ರೀಯಾಗಿ ಚಿಕನ್ ನಗೆಟ್ಸ್ ಪಡೆಯಲು ಇತ್ತೀಚೆಗಷ್ಟೆ 16 ವರ್ಷದ ಹುಡುಗನೊಬ್ಬ ಟ್ವಿಟ್ಟರ್ ಮೊರೆಹೋಗಿದ್ದ. ಮಿಲಿಯನ್ ಗಟ್ಟಲೆ ರಿಟ್ವೀಟ್ ಬಂದಿದ್ರಿಂದ ರೆಸ್ಟೋರೆಂಟ್ ಒಂದು ಅವನಿಗೆ ಫ್ರೀಯಾಗಿ ಒಂದು ವರ್ಷ ಚಿಕನ್ ನಗೆಟ್ಸ್ ಕೊಡೋದಾಗಿ ಹೇಳಿತ್ತು. ಈ ಘಟನೆಯಿಂದ ಪ್ರೇರಿತನಾದ ಭಾರತೀಯನೊಬ್ಬ ಅಂಥದ್ದೇ ಕಸರತ್ತು ಶುರು ಮಾಡಿದ್ದಾನೆ.

ಅಂಕಿತ್ ಎಂಬಾತನಿಗೆ ಒಂದು ವರ್ಷ ಉಚಿತವಾಗಿ ಬಿಯರ್ ಬೇಕಂತೆ. ಇದಕ್ಕಾಗಿಯೇ ಅಂಕಿತ್ ಟ್ವಿಟ್ಟರ್ ನಲ್ಲಿ ಟ್ವೀಟ್ ಕೂಡ ಮಾಡಿದ್ದಾನೆ. ಬಿರಾ91 ಎಂಬ ಕಂಪನಿ 91,000 ರಿಟ್ವೀಟ್ ಗಿಟ್ಟಿಸಿಕೊಂಡ್ರೆ ಒಂದು ವರ್ಷ ಫ್ರೀಯಾಗಿ ಬಿಯರ್ ಕೊಡೋದಾಗಿ ಹೇಳಿದೆ. ಹಾಗಾಗಿ ಹೇಗಾದ್ರೂ ಮಾಡಿ ರಿಟ್ವೀಟ್ ಬರಲಿ ಅನ್ನೋದು ಅಂಕಿತ್ ಆಸೆ.

ಅಂಕಿತ್ ಗೆ ಸಹಾಯ ಮಾಡಲು ಮುಂದಾದ ಬಿಯರ್ ಕಂಪನಿಯೇ ಮೊದಲ ಟ್ವೀಟ್ ಮಾಡಿತ್ತು. ಇದುವರೆಗೂ ಅಂಕಿತ್ ಟ್ವೀಟ್ ಗೆ 6500 ರಿಟ್ವೀಟ್ಸ್ ಬಂದಿವೆ. ಇನ್ನೊಂದಷ್ಟು ರಿಟ್ವೀಟ್ಸ್ ಬಂದ್ರೆ ವರ್ಷಪೂರ್ತಿ ಉಚಿತವಾಗಿ ಬಿಯರ್ ಕುಡಿಯಬಹುದು ಅಂತಾ ಅಂಕಿತ್ ಕನಸು ಕಾಣ್ತಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...