alex Certify
ಕನ್ನಡ ದುನಿಯಾ       Mobile App
       

Kannada Duniya

ಚಾಯ್ ವಾಲಾನ ಕೈಚಳಕಕ್ಕೆ ಟ್ವೀಟಿಗರು ಫಿದಾ

ದೇವರ ನಾಡು ಕೇರಳದ ಚಾಯ್ ಮಾರುವ ವ್ಯಕ್ತಿಯೊಬ್ಬ, ಟೀ ಮಾಡುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡಿದೆ.

ಅರೇ, ಟೀ ಮಾಡುವುದರಲ್ಲಿ ವಿಶೇಷತೆ ಏನಿದೆ ಎಂದು ಯೋಚಿಸುವ ಮೊದಲು ಈ ವಿಡಿಯೋವನ್ನು ಒಮ್ಮೆ ನೋಡಲೇಬೇಕು.

ದೇವರ ನಾಡಿನಲ್ಲಿ ಚಹಾಗೆ ಎಲ್ಲಿಲ್ಲದ ಬೇಡಿಕೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ವಿಡಿಯೋದಲ್ಲಿರುವ ವ್ಯಕ್ತಿಯ ಚಹಾ ಕೇವಲ ನಾಲಿಗೆ ಮಾತ್ರವಲ್ಲದೇ, ಕಣ್ಣಿಗೂ ಆಹಾ ಎನ್ನುವಂತೆ ಮಾಡುವುದರಲ್ಲಿ ಅನುಮಾನವೇ ಇಲ್ಲ.

ಚಹಾ ನೀಡುವಾಗ, ಲೋಟದಲ್ಲಿ ಹಾಲು ಮತ್ತು ಟೀಯನ್ನು ಮಿಕ್ಸ್ ಮಾಡಲು, ಬಳಸುವ ವಿಧಾನವೇ ಈತನ ವೈಶಿಷ್ಟ್ಯ. ಲೋಟವನ್ನು ಸಂಪೂರ್ಣ ಉಲ್ಟಾ ಮಾಡುವ ಈತ ಒಂದು ಹನಿಯನ್ನು ಕೆಳಗೆ ಚೆಲ್ಲದೇ ಮಿಕ್ಸ್ ಮಾಡುವುದು ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಕರಾಮತ್ತಿಗೆ ಮನ ಸೋತಿರುವ ಜನರು, ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯ ಕೈಚಳಕಕ್ಕೆ ಶಹಬಾಸ್‌ಗಿರಿ ನೀಡಿದ್ದಾರೆ. ಈಗಾಗಲೇ ಈ ವಿಡಿಯೋವನ್ನು ಆರುವರೆ ಲಕ್ಷ ಜನ ಮಂದಿ ವೀಕ್ಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...