alex Certify
ಕನ್ನಡ ದುನಿಯಾ       Mobile App
       

Kannada Duniya

ಈ ‘ಟ್ರೀ ಗಣೇಶ’ ನ ವಿಶೇಷತೆ ಏನು ಗೊತ್ತಾ…?

ಸೆಪ್ಟೆಂಬರ್ ನಲ್ಲಿ ಶುರುವಾಗಲಿರುವ ಗಣೇಶ ಹಬ್ಬದ ಸಂಭ್ರಮಕ್ಕೆ ಈಗಾಗ್ಲೇ ದೇಶದೆಲ್ಲೆಡೆ ಭರದ ಸಿದ್ಧತೆಗಳು ನಡೆಯುತ್ತಿವೆ. ಪ್ರತಿ ಬಾರಿಯ ಹಾಗೆ ಈ ಬಾರಿಯೂ ಪರಿಸರ ಸ್ನೇಹಿ ಗಣಪನ ಆರಾಧನೆಯನ್ನು ಬೆಂಬಲಿಸುವ ಅನೇಕ ಯೋಜನೆಗಳು ಜಾರಿಗೆ ಬರುತ್ತಿವೆ.

ಅದರಲ್ಲು ಮುಂಬೈ ಮಹಾನಗರಿ ಸೇರಿದಂತೆ ಹಲವು ಕಡೆಗಳಲ್ಲಿ ಗಣೇಶ ಹಬ್ಬದ ಸಂಭ್ರಮ ತಿಂಗಳುಗಟ್ಟಲೆ ನಡೆಯುವುದರಿಂದ ಪರಿಸರ ಸ್ನೇಹಿ ಗಣಪನ ಆರಾಧಿಸಿ ಅನ್ನೋ ಕೂಗು ಹೆಚ್ಚಾಗುತ್ತದೆ.

ಈಗಾಗ್ಲೇ ಬಣ್ಣ ರಹಿತವಾದ ಪರಿಸರ ಸ್ನೇಹಿ ಗಣಪನನ್ನ ನೀವೆಲ್ಲಾ ನೋಡಿದ್ದೀರಿ. ಆದ್ರೆ ದತ್ತಾತ್ರೇಯ ಕೊತ್ತುರು ಎಂಬುವವರು ಮನೆಯ ಅಂಗಳದಲ್ಲಿ ಗಣಪನ ಮೂರ್ತಿ ವಿಸರ್ಜನೆ ಮಾಡಿ 10 ದಿನಗಳ ಒಳಗೆ ಗಣಪನಿಂದ ಸಸಿಯೊಂದು ಚಿಗುರುವಂತಾ ಗಣೇಶನ ವಿಗ್ರಹ ತಯಾರಿಯಲ್ಲಿ ನಿರತರಾಗಿದ್ದಾರೆ.

ವಿನಾಯಕನ ಮೂರ್ತಿಯನ್ನು ತಯಾರಿಸುವ ಮಣ್ಣಲ್ಲಿ ಹಲವು ಬೀಜಗಳನ್ನು ಮಿಶ್ರಣ ಮಾಡುತ್ತಿದ್ದಾರೆ. ಹಬ್ಬ ಮುಗಿದ ಬಳಿಕ ಈ ಮೂರ್ತಿಯನ್ನ ಮನೆಯ ಟೆರೇಸ್ ನಲ್ಲೋ , ಗಾರ್ಡನ್ ನಲ್ಲೋ ಬಾಲ್ಕನಿಯಲ್ಲೋ ಒಂದು ಪಾಟ್ ನಲ್ಲಿಟ್ಟು ಅದರ ಮೇಲೆ ನೀರು ಸುರಿಯುತ್ತಾ ಬನ್ನಿ.

ಹತ್ತು ದಿನಗಳಲ್ಲಿ ಆ ಮೂರ್ತಿ ಕರಗಿ ಅದರಲ್ಲಿರುವ ಬೀಜ ಮಣ್ಣು ಸೇರಿ ಅಲ್ಲಿ ಸಸಿ ಚಿಗುರುತ್ತದೆ ಅಂತಿದ್ದಾರೆ ದತ್ತಾತ್ರೇಯ ಕೊಟ್ಟುರು. ಟ್ರೀ ಗಣೇಶ ಎಂಬ ಹೆಸರಿನಲ್ಲಿ ಅವರು ಈ ಮೂರ್ತಿಗಳನ್ನ ಮಾರಾಟ ಮಾಡ್ತಿದ್ದಾರೆ.

ರೋಹಿತ್ ವಾಸ್ತೆ ಎಂಬ ಮತ್ತೊಬ್ಬ ಕಲಾವಿದ ಪೇಪರ್ ನಲ್ಲಿ ಗಣೇಶನನ್ನು ಸೃಷ್ಟಿ ಮಾಡ್ತಿದ್ದಾರೆ. ಇಂತಾ ಪರಿಸರ ಸ್ನೇಹಿ ಕಾರಣಗಳಿಂದಾಗಿ ಈ ಬಾರಿಯ ಗಣೇಶ ಹಬ್ಬ ಮತ್ತಷ್ಟು ರಂಗೇರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...