alex Certify
ಕನ್ನಡ ದುನಿಯಾ       Mobile App
       

Kannada Duniya

ಲಿಂಗ ಬದಲಾವಣೆಗೆಂದು ಆಸ್ಪತ್ರೆಗೆ ಬಂದವರ ಬದುಕಲ್ಲಿ ನಡೆದಿದ್ದೇ ಬೇರೆ

46 ವರ್ಷದ ಆರವ್ ಅಪ್ಪುಕುಟ್ಟಮ್ ಒಬ್ಬ ಮಹಿಳೆಯಾಗಿದ್ಲು, ಆದ್ರೆ ಈಗ ಪುರುಷನಾಗಿ ಬದಲಾಗಿದ್ದಾನೆ. 21 ವರ್ಷದ ಸುಕನ್ಯ ಕೃಷ್ಣ ಹುಟ್ಟಿದಾಗ ಗಂಡು, ಆದ್ರೀಗ ಮಹಿಳೆಯಾಗಿ ಬದಲಾಗಿದ್ದಾಳೆ. ಇವರಿಬ್ರೂ ಮುಂಬೈನಲ್ಲಿ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗಾಗಿ ಬಂದಿದ್ರು.

ಕ್ಲಿನಿಕ್ ನಲ್ಲಿ ಮೊದಲ ಬಾರಿ ಭೇಟಿಯಾಗಿದ್ರು. ಹೀಗೆ ಪರಿಚಯ ಸ್ನೇಹವಾಗಿ, ಪ್ರೇಮಕ್ಕೆ ತಿರುಗಿತ್ತು. ಈಗ ತಮ್ಮದೇ ಒಂದು ಸಂಸ್ಥೆಯನ್ನು ಆರಂಭಿಸಿ, ಲಿಂಗ ಗುರುತಿನ ಅಸ್ವಸ್ಥತೆಯಿಂದ ಬಳಲುತ್ತಿರುವವರಿಗೆ ನೆರವಾಗಲು ಯೋಜನೆ ಹಾಕಿಕೊಂಡಿದ್ದಾರೆ. ಅಂತಹ ಮಕ್ಕಳ ಸಮಸ್ಯೆಯನ್ನು ಅರ್ಥಮಾಡಿಕೊಳ್ಳದ ಪೋಷಕರಿಗೆ ಕೂಡ ತಿಳಿಹೇಳುವುದು ಇವರ ಉದ್ದೇಶ.

ಈ ರೀತಿ ಲಿಂಗ ಸಮಸ್ಯೆ ಇರುವವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಹಿಂಜರಿಯುತ್ತಾರೆ. ಇದೇ ಕೊರಗಿನಲ್ಲಿ ಆತ್ಮಹತ್ಯೆಗೂ ಮುಂದಾಗುತ್ತಾರೆ. ಇಂತಹ ಸಮಸ್ಯೆಗಳಿಂದ ಬಳಲುತ್ತಿರುವವರನ್ನು ತಲುಪಲು ಆರವ್ ಹಾಗೂ ಸುಕನ್ಯ ಫೇಸ್ಬುಕ್ ಗ್ರೂಪ್ ಒಂದನ್ನು ಆರಂಭಿಸಿದ್ದಾರೆ.

ಈ ಗ್ರೂಪ್ ನಲ್ಲಿ ವೈದ್ಯರು ಕೂಡ ಇದ್ದಾರೆ. ಲಿಂಗ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವ 2000ಕ್ಕೂ ಅಧಿಕ ಮಂದಿ ಜಾಯಿನ್ ಆಗಿದ್ದಾರೆ. ಕೆಲವರು ತಪ್ಪುತಪ್ಪಾದ ಸರ್ಜರಿಗೆ ಒಳಗಾಗಿ ಇನ್ನೊಂದಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ. ಅದನ್ನೆಲ್ಲ ತಪ್ಪಿಸಿ, ಸೂಕ್ತ ಮಾರ್ಗದರ್ಶನ ನೀಡಲು ಆರವ್ ಹಾಗೂ ಸುಕನ್ಯ ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...