alex Certify
ಕನ್ನಡ ದುನಿಯಾ       Mobile App
       

Kannada Duniya

ಬಡ ಮಕ್ಕಳ ಮಿಲ್ಕ್ ಶೇಕ್ ಲುಧಿಯಾನದ ಈ ಚಾಕಲೇಟ್ ಗಣೇಶ

CHOCOLATE GANESHಲುಧಿಯಾನದ ಬೇಕರಿಯೊಂದರಲ್ಲಿ ಚಾಕಲೇಟ್ ಗಣೇಶ ಮಕ್ಕಳ ಬಾಯಲ್ಲಿ ನೀರೂರಿಸ್ತಿದ್ದಾನೆ. ಅಷ್ಟೇ ಅಲ್ಲ ನಿರ್ಗತಿಕ ಮಕ್ಕಳ ಪಾಲಿಗೆ ಮಿಲ್ಕ್ ಶೇಕ್ ಆಗಿ ಬದಲಾಗ್ತಿದ್ದಾನೆ.

ಹರ್ಜಿಂದರ್ ಸಿಂಗ್ ಕುಕ್ರೇಜಾ ಅವರಿಗೆ ತಮ್ಮ ಬೇಕರಿಯಲ್ಲಿ ಈ ಬಾರಿ ಪರಿಸರ ಸ್ನೇಹಿ ಗಣಪನನ್ನು ಕೂರಿಸಬೇಕೆಂಬ ಆಲೋಚನೆ ಹೊಳೆದಿತ್ತು. ಮಾರುಕಟ್ಟೆಯಿಂದ ಮಣ್ಣಿನ ಗಣಪತಿ ಮೂರ್ತಿಯನ್ನು ತರುವ ಬದಲು ಹರ್ಜಿಂದರ್ ತಮ್ಮ ಬೇಕರಿಯಲ್ಲೇ ಗಣೇಶನ ಮೂರ್ತಿ ತಯಾರಿಸಲು ಆರಂಭಿಸಿದ್ರು. ಅದು ಕೂಡ ಮಣ್ಣಿನಿಂದಲ್ಲ, ಚಾಕಲೇಟ್ ನಿಂದ.

ಕೇವಲ ಒಂದು ವಾರದಲ್ಲಿ ಚಾಕಲೇಟ್ ಗಣೇಶನನ್ನು ತಯಾರಿಸಲಾಯ್ತು. 3 ಅಡಿ ಎತ್ತರದ ಈ ಚಾಕಲೇಟ್ ಗಣಪ 40 ಕೆಜಿ ತೂಕವಿದ್ದಾನೆ. ಗಣೇಶ ಚತುರ್ಥಿ ಮುಗಿದ ತಕ್ಷಣ ಹರ್ಜಿಂದರ್ ಸಿಂಗ್ ಚಾಕಲೇಟ್ ಗಣಪನನ್ನು ನೀರಿನಲ್ಲಿ ಮುಳುಗಿಸಿ ವಿಸರ್ಜನೆ ಮಾಡಿರಬೇಕು ಅಂದ್ಕೋಬೇಡಿ. ಈ ಚಾಕಲೇಟ್ ಗಣೇಶನಿಂದ ಬಡ ಮಕ್ಕಳಿಗೆ ನೆರವಾಗುವುದು ಹರ್ಜಿಂದರ್ ಅವರ ಸದುದ್ದೇಶ.

ಈ ಗಣೇಶ ಮೂರ್ತಿಯಿಂದ ಬಡ ಮತ್ತು ನಿರ್ಗತಿಕ ಮಕ್ಕಳಿಗೆ ಅವರು ಚಾಕಲೇಟ್ ಮಿಲ್ಕ್ ಶೇಕ್ ಮಾಡಿ ಕೊಡ್ತಿದ್ದಾರೆ. ಈ ಮೂಲಕ ಸಾಮಾಜಿಕ ಕಳಕಳಿ ಮೆರೆಯುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...