alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಎಮ್ಮೆ ಬೆಲೆ ಬರೋಬ್ಬರಿ 5 ಕೋಟಿ ರೂಪಾಯಿ..!

buffalow

ಎಮ್ಮೆ ತರ ಬೆಳದಿದ್ದೀಯಾ? ಮೂರು ಕಾಸಿಗೂ ಪ್ರಯೋಜನವಿಲ್ಲ ಅಂತಾ ಬೈತಾರೆ ನಮ್ಮಲ್ಲಿ. ಆದ್ರೆ ಎಮ್ಮೆಗೂ ಈಗ ಬೆಲೆ ಇದೆ ಸ್ವಾಮಿ. ಹತ್ತೋ, ಇಪ್ಪತ್ತೋ ಸಾವಿರ ಅಲ್ಲ, ಆರು, ಏಳು ಲಕ್ಷವೂ ಅಲ್ಲ ಬರೋಬ್ಬರಿ ಐದು ಕೋಟಿ.

ಆಶ್ಚರ್ಯವಾದ್ರೂ ಇದು ಸತ್ಯ. ಕೋಟಿ ಕೋಟಿ ಬೆಲೆ ಬಾಳುವ ಈ ಎಮ್ಮೆ ಇರೋದು ಹಿಮಾಚಲ ಪ್ರದೇಶದ ಬಿಲಾಸಪುರದಲ್ಲಿ. ಇದು ವಿಶಿಷ್ಟ ತಳಿಯ ಎಮ್ಮೆಯಂತೆ. ಇದಕ್ಕೆ ಹುಟ್ಟುವ ತಳಿ ಕೂಡ ವಿಶಿಷ್ಟವಾಗಿಯೇ ಇರುತ್ತದೆ. ಹಾಗಾಗಿ ಇಷ್ಟೊಂದು ಬೆಲೆ ಎನ್ನುತ್ತಾನೆ ಮಾಲೀಕ.

13 ಅಡಿ ಉದ್ದದ ಈ ಎಮ್ಮೆ ತೂಕ 10 ಕ್ವಿಂಟಾಲ್. 5 ಅಡಿ 8 ಇಂಚಿನ ಎಮ್ಮೆ ವಯಸ್ಸು ಎರಡುವರೆ ವರ್ಷ. ಸೇಬುವನ್ನು ಇಷ್ಟಪಡುವ ಈ ಎಮ್ಮೆ, ಪ್ರತಿ ವರ್ಷ ಮೂರು ಕ್ವಿಂಟಾಲ್ ಸೇಬು ತಿನ್ನುತ್ತದೆಯಂತೆ. ಪ್ರತಿ ದಿನ ಒಂದು ಸಾವಿರ ರೂಪಾಯಿ ಬೆಲೆಯ ಆಹಾರವನ್ನು ಸೇವಿಸುತ್ತದೆಯಂತೆ. ಪ್ರತಿ ದಿನ ಎರಡು ಕೆಜಿ ತೈಲದಲ್ಲಿ ಮಸಾಜ್ ಮಾಡಲಾಗುತ್ತದೆಯಂತೆ.

ಆಗಸ್ಟ್ 5 ರಂದು ಹರಾಜು ಪ್ರಕ್ರಿಯೆ ನಡೆಯಲಿದೆ. 5 ಕೋಟಿಯಿಂದ ಹರಾಜು ನಡೆಯಲಿದೆ. ಎಮ್ಮೆ ಮಾಲೀಕನ ಮನೆಯಲ್ಲಿಯೇ ಹರಾಜು ಕರೆಯಲು ಪಂಚಾಯತಿ ತೀರ್ಮಾನಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...