alex Certify
ಕನ್ನಡ ದುನಿಯಾ       Mobile App
       

Kannada Duniya

ಬಡ ಮಕ್ಕಳಿಗೆ ಬಂಗಾರದ ಕಿವಿಯೋಲೆ ಕೊಡಿಸಿದ ಭಿಕ್ಷುಕ

download

ಈ ಭಿಕ್ಷುಕನನ್ನು ನೀವು ಹೀಗಳೆಯಬೇಡಿ. ಭಿಕ್ಷೆ ಬೇಡಿ ಬಂದ ಹಣದಲ್ಲಿ ತನ್ನ ಜೀವನೋಪಾಯಕ್ಕಾಗಿ ಸ್ವಲ್ಪ ಹಣವನ್ನು ಇಟ್ಟುಕೊಂಡು ಮಿಕ್ಕದ್ದನ್ನು ಈತ ಸಾಮಾಜಿಕ ಕಾರ್ಯಗಳಿಗೆ ಬಳಸುತ್ತಿದ್ದಾರೆ. ಅದರಲ್ಲೂ ಬಡ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಈ ಹಣ ವಿನಿಯೋಗಿಸುತ್ತಿದ್ದಾರೆ.

ಮೆಹ್ಸನಾದ 68 ವರ್ಷದ ಖಿಮ್ಜಿಭಾಯ್ ಪ್ರಜಾಪತಿ ಕಳೆದ 13 ವರ್ಷಗಳಿಂದಲೂ ಈ ಕಾರ್ಯ ಮಾಡಿಕೊಂಡು ಬರುತ್ತಿದ್ದು, ಭಿಕ್ಷೆ ಬೇಡಿದ ಹಣದಲ್ಲಿ ಅಂಗನವಾಡಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕಡು ಬಡ ಕುಟುಂಬದ ಹೆಣ್ಣು ಮಕ್ಕಳಿಗೆ ಪುಸ್ತಕ, ಯೂನಿಫಾರ್ಮ್ ಕೊಡಿಸುತ್ತಿದ್ದಾರೆ.

ಈ ಬಾರಿ ಖಿಮ್ಜಿಭಾಯ್ ಮಗ್ಪಾರುದ ಅಂಗನವಾಡಿಯಲ್ಲಿ ಕಲಿಯುತ್ತಿರುವ 10 ಹೆಣ್ಣು ಮಕ್ಕಳಿಗೆ ಬಂಗಾರದ ಕಿವಿಯೋಲೆ ಕೊಡಿಸಿದ್ದಾರೆ. ಖಿಮ್ಜಿಭಾಯ್ ಈ ಮಕ್ಕಳಿಗೆ ಕಿವಿಯೋಲೆ ನೀಡುತ್ತಿದ್ದಂತೆಯೇ ಆ ಬಡ ಕುಟುಂಬದ ಪೋಷಕರ ಕಣ್ಣಂಚು ತೇವವಾಗಿದೆ. ಕೂಲಿ ಕಾರ್ಮಿಕರಾಗಿರುವ ತಾವುಗಳು ಮಕ್ಕಳಿಗೆ ಬಂಗಾರ ಕೊಡಿಸುವುದು ಕನಸಿನ ಮಾತು. ಖಿಮ್ಜಿಭಾಯ್ ಸಹಾಯದಿಂದ ಇಂದು ಅದು ನೆರವೇರಿದೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...