alex Certify
ಕನ್ನಡ ದುನಿಯಾ       Mobile App
       

Kannada Duniya

ಕಣ್ಣಂಚಲ್ಲಿ ನೀರು ತರಿಸುತ್ತೆ ದೀಪಾವಳಿಯ ಈ ಜಾಹೀರಾತು…!

ವಿಡಿಯೋ ನೋಡುವ ಮುನ್ನ ಕೈಯಲ್ಲಿ ಕರವಸ್ತ್ರ ಹಿಡಿದುಕೊಳ್ಳಿ, ದೀಪಾವಳಿಯ ಈ ಜಾಹೀರಾತು ಖಂಡಿತಾ ನಿಮ್ಮ ಹೃದಯ ತಟ್ಟುತ್ತದೆ, ಮುಗಿಯುವ ಹೊತ್ತಲ್ಲಿ ಕಣ್ಣಂಚಲ್ಲಿ ನೀರು ತುಂಬಿರುತ್ತದೆ.

ಸ್ಥಳೀಯವಾಗಿ ಶಾಪಿಂಗ್ ಮಾಡಿ ಹಾಗೂ ಬೀದಿ ವ್ಯಾಪಾರಿಗಳಿಗೆ ಬೆಂಬಲ ನೀಡಿ ಎಂದು ಕರೆ ನೀಡುವ ಈ ಜಾಹೀರಾತನ್ನು ಎಚ್‌.ಪಿ. ಇಂಡಿಯಾ ನಿರ್ಮಿಸಿದೆ. ಈ ಜಾಹೀರಾತು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

3 ನಿಮಿಷದ ಈ ಜಾಹೀರಾತಿನಲ್ಲಿ ಮಹಿಳೆಯೊಬ್ಬಳು ಮಣ್ಣಿನ ಹಣತೆಗಳನ್ನು ಬೀದಿಯಲ್ಲಿ ಮಾರುತ್ತಿರುತ್ತಾಳೆ. ಆಕೆಯ ಹಣತೆಗಳ ಮಾರಾಟಕ್ಕೆ ಹುಡುಗನೊಬ್ಬ ಹೇಗೆ ನೆರವಾಗುತ್ತಾನೆ ಎಂಬುದೇ ಅದರ ಥೀಮ್. ‘ಉಮ್ಮೇದ್ ಕಾ ದಿಯಾ’ ಅಥವಾ ‘ಭರವಸೆಯ ಬೆಳಕು’ ಎಂಬುದಾಗಿ ಶೀರ್ಷಿಕೆ ನೀಡಲಾಗಿದೆ.

“ಬೀದಿ ವ್ಯಾಪಾರಿಗಳಿಗೆ ಬೆಂಬಲಿಸಿ, ನಮ್ಮ ಮನೆಯಲ್ಲಿನ ಬೆಳಕು ಅವರ ಮನೆಗಳನ್ನೂ ಬೆಳಗಲಿ” ಎಂದು ಎಚ್‌.ಪಿ. ಇಂಡಿಯಾ ತನ್ನ ಆಶಯವನ್ನು ಹೇಳಿಕೊಂಡಿದೆ. ಗುರುವಾರ ಈ ವಿಡಿಯೋ ಶೇರ್ ಮಾಡಲಾಗಿದ್ದು, ಕೇವಲ 4 ದಿನಗಳಲ್ಲಿ 23 ಲಕ್ಷ ಮಂದಿ ಈ ಜಾಹೀರಾತು ನೋಡಿದ್ದಾರೆ. ಅನೇಕರು ಈ ವಿಡಿಯೋ ನೋಡಿ ತಾವು ಬೀದಿ ಬದಿಯ ವ್ಯಾಪಾರಿಗಳಿಗೆ ಬೆಂಬಲ ನೀಡುವ ವಾಗ್ದಾನವನ್ನೂ ನೀಡಿದ್ದಾರೆ.

Umeed ka Diya

One small step taken by all of us can bring along a big difference in someone else’s Diwali. Support the street vendors, our lights brighten their homes too.#TuJashnBan kisi ki zindagi ka, an HP India initiative. https://bit.ly/2CY6omJ

Posted by HP India on Thursday, November 1, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...