alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ 5 ರೂಪಾಯಿಗೆ ಇಲ್ಲಿ ಸಿಗುತ್ತೇ ಊಟ…!

5 ರೂಪಾಯಿಗೆ ಊಟ, 10 ರೂಪಾಯಿಗೆ ಬಟ್ಟೆ ಸಿಗೋದನ್ನ ನೀವು ಎಲ್ಲಾದ್ರೂ ಕೇಳಿದ್ದೀರಾ? ಆದ್ರೆ ನೋಯ್ಡಾದ ‘ದಾದಿ ಕಿ ರಸೋಯಿ’ ಯಲ್ಲಿ ಇಷ್ಟು ಕಡಿಮೆ ಬೆಲೆಗೆ ಊಟ, ಬಟ್ಟೆ ಎರಡೂ ಸಿಗುತ್ತೆ.

ಹೌದು, ಇದರ ಕಾರಣಕರ್ತ ಅನೂಪ್ ಖನ್ನಾ ‘ದಾದಿ ಕಿ ರಸೋಯಿ’ ಯ ಮಾಸ್ಟರ್ ಮೈಂಡ್. ಎಲ್ಲಾ ಮಕ್ಕಳಂತೆ ಇವರು ಕೂಡಾ ತಮ್ಮ ತಾಯಿ ಸರಿಯಾಗಿ ಊಟ ಮಾಡ್ತಿಲ್ಲ ಅಂತಾ ಯೋಚಿಸುತ್ತಿದ್ರು. ಆದ್ರೆ ವಯಸ್ಸಾದವರಿಗೆ ಹಸಿವು ಜಾಸ್ತಿ ಆಗುವುದಿಲ್ಲ ಅಲ್ವಾ. ಹೀಗಾಗಿ ಇವರು ತಮ್ಮ ತಾಯಿ ಹೆಸರಲ್ಲಿ ನಿಜವಾಗಿಯೂ ಅಗತ್ಯವಿರುವವರಿಗೆ ಅನ್ನ ದಾನ ಮಾಡಿದ್ರೆ ಹೇಗೆ ಎಂದು ಯೋಚಿಸಿದ್ರು. ಆಗ ಶುರುವಾಗಿದ್ದೇ ‘ದಾದಿ ಕಿ ರಸೋಯಿ’.

5 ರೂಪಾಯಿಗೆ ಅನೂಪ್ ಊಟ ಕೊಡ್ತಿದ್ದಾರೆ ಅಂದ್ರೆ ಅದು ತುಂಬಾ ಕಳಪೆಯಾಗಿರುತ್ತೆ ಅಂತಾ ಅಂದ್ಕೊಂಡಿದ್ರೆ ಅದು ನಿಮ್ಮ ತಪ್ಪು ಭಾವನೆ. ಯಾಕೆಂದ್ರೆ ಅನುಪ್ ನೀಡ್ತಿರೋ ಆಹಾರ ಶುದ್ದ ತುಪ್ಪದಲ್ಲಿ ತಯಾರಿಸಲಾಗಿರುತ್ತೆ. ಹಣ್ಣುಗಳಿಂದ ಸಿಹಿ ತಯಾರಿಸಿರುತ್ತಾರೆ. ಜೊತೆಗೆ ರುಚಿ ಮತ್ತು ಶುಚಿಯಾದ ಆಹಾರವನ್ನು ನೀಡ್ತಿದ್ದಾರೆ.

ಇನ್ನು ಅನೂಪ್ ತಯಾರಿಸಿದ ಆಹಾರವನ್ನು ವಿತರಿಸಲು ಸ್ನೇಹಿತರು ಜೊತೆಯಾಗ್ತಿದ್ರು. ಆದ್ರೆ ಎಲ್ಲಾ ಸಮಯದಲ್ಲೂ ಅವರು ಬರಲಾಗುವುದಿಲ್ಲ ಎಂದು ಇದೀಗ, ಅನೂಪ್ ಆಹಾರ ವಿತರಿಸಲು ಜನರನ್ನು ನೇಮಿಸಿಕೊಂಡಿದ್ದಾರೆ. ಹಾಗೆಯೇ ಆಹಾರದ ಜೊತೆಗೆ ಬಟ್ಟೆಯನ್ನು 10 ರೂಪಾಯಿಗೆ ನೀಡುತ್ತಿದ್ದಾರೆ.

ಅನೂಪ್ ಅವರ ಈ ಕಾರ್ಯಕ್ಕೆ ಮೆಚ್ಚಿ ತುಂಬಾ ಜನ ಆಹಾರ, ಬಟ್ಟೆ ಮತ್ತಿತರ ವಸ್ತುಗಳನ್ನು ದಾನ ಮಾಡಿ ಹೋಗ್ತಿದ್ದಾರೆ. ಹೀಗಾಗಿ ನೋಯ್ಡಾದ ಸೆಕ್ಟರ್ 25 ರಲ್ಲಿ ಮೊದಲು ತಮ್ಮ ಸೇವಾ ಕಾರ್ಯ ಆರಂಭಿಸಿದ್ದ ಅನೂಪ್, ಇದೀಗ ಸೆಕ್ಟರ್ 17ಕ್ಕೂ ವಿಸ್ತರಿಸುವ ಚಿಂತನೆಯಲ್ಲಿದ್ದಾರೆ.

ಇಷ್ಟೇ ಅಲ್ಲಾ, ಅನೂಪ್ ಒಂದು ಔಷಧಿ ಅಂಗಡಿಯನ್ನೂ ಹೊಂದಿದ್ದಾರೆ. ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಪ್ರಯೋಜನ್ ಅಡಿಯಲ್ಲಿ ತಮ್ಮ ಅಂಗಡಿಯಲ್ಲಿ ಕಡಿಮೆ ಬೆಲೆಗೆ ಔಷಧಿ ನೀಡ್ತಿದ್ದಾರೆ. ನಿಜಕ್ಕೂ ಅನೂಪ್ ಅವರ ಸಮಾಜಮುಖಿ ಕಾರ್ಯ ಮೆಚ್ಚಲೇಬೇಕು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...