alex Certify
ಕನ್ನಡ ದುನಿಯಾ       Mobile App
       

Kannada Duniya

ಎ.ಟಿ.ಎಂ. ನಲ್ಲೂ ಸಿಗುತ್ತೆ ತಾಯಿ ಹಾಲು..!

pudu atm

ಪುದುಚೇರಿ: ಹಣ, ಹಾಲು ಮೊದಲಾದವುಗಳನ್ನು ಅವಶ್ಯವಿದ್ದಾಗ ಪಡೆಯಲು ಎ.ಟಿ.ಎಂ. ಸೆಂಟರ್ ಗಳನ್ನು ಸ್ಥಾಪಿಸಲಾಗಿದೆ. ಅದೇ ರೀತಿ, ಅವಧಿ ಪೂರ್ವ ಜನಿಸುವ ಮಕ್ಕಳ ಅನುಕೂಲಕ್ಕಾಗಿ ಪುದುಚೇರಿಯಲ್ಲಿ ತಾಯಿ ಹಾಲಿನ ಎ.ಟಿ.ಎಂ. ಸ್ಥಾಪಿಸಲಾಗಿದೆ.

ಪುದುಚೇರಿಯ ಜವಾಹರಲಾಲ್ ಸ್ನಾತಕೋತ್ತರ ವೈದ್ಯಕೀಯ ಪದವಿ ಹಾಗೂ ಸಂಶೋಧನಾ ಕೇಂದ್ರದಲ್ಲಿ ಅಮುದಂ ತೈಪಾಲ್ ಮೈಯಂ (ಎ.ಟಿ.ಎಂ.) ಸೆಂಟರ್ ಆರಂಭಿಸಿದ್ದು, ಅವಧಿ ಪೂರ್ವವಾಗಿ ಜನಿಸಿದ ಮಕ್ಕಳ ಆರೈಕೆ, ರಕ್ಷಣೆಗಾಗಿ ಈ ಸೆಂಟರ್ ಬಳಕೆಯಾಗಲಿದೆ. ಜವಾಹರಲಾಲ್ ಸ್ನಾತಕೋತ್ತರ ವೈದ್ಯಕೀಯ ಪದವಿ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕರಾದ ಎಸ್.ಸಿ.ಪರಿಜಾ ಈ ಬಗ್ಗೆ ಮಾಹಿತಿ ನೀಡಿದ್ದು, ಮಕ್ಕಳಿಗೆ ತಾಯಿ ಹಾಲಿನ ಬದಲಿಗೆ ಬೇರೆ ಹಾಲು ಕುಡಿಸಿದರೆ ಅಡ್ಡ ಪರಿಣಾಮ ಉಂಟಾಗಬಹುದು ಎಂದು ಹೇಳಿದ್ದಾರೆ.

ಪ್ರತಿ ತಿಂಗಳು ಸುಮಾರು 1500 ಶಿಶುಗಳು ಈ ಆಸ್ಪತ್ರೆಯಲ್ಲಿ ಜನಿಸಲಿದ್ದು, ಅವುಗಳಲ್ಲಿ ಶೇ.30 ರಷ್ಟು ಕಡಿಮೆ ತೂಕವನ್ನು ಹೊಂದಿರುತ್ತವೆ. ಈ ಬ್ಯಾಂಕ್ ನಿಂದಾಗಿ ಅವಶ್ಯಕತೆ ಇದ್ದಾಗ ತಾಯಿ ಹಾಲನ್ನು ಸಂಗ್ರಹಿಸಿ ಬಳಸಬಹುದಾಗಿದೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...