alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಹಿರಿಯ ಜೀವಕ್ಕೆ ಹೇಳಿ ಹ್ಯಾಟ್ಸಾಫ್

mitalal

ಈಗಿನ ಕಾಲದಲ್ಲಿ ಇನ್ನೊಬ್ಬರ ಕಷ್ಟಕ್ಕೆ ಆಗುವವರ ಸಂಖ್ಯೆ ತೀರಾ ಕಡಿಮೆ ಎನ್ನಬಹುದು. ಇಲ್ಲೊಬ್ಬರು ಹಿರಿಯರು, ಮಾಡುತ್ತಿರುವ ಸಾಮಾಜಿಕ ಕಳಕಳಿಯ ಕೆಲಸ ಇತರರಿಗೆ ಮಾದರಿಯಾಗುವಂತಿದೆ. ಅಷ್ಟಕ್ಕೂ ಏನಿದು ಘಟನೆ ಎಂಬುದನ್ನು ತಿಳಿಯಲು ಮುಂದೆ ಓದಿ.

ಅಹಮದಾಬಾದ್ ನಲ್ಲಿರುವ 83 ವರ್ಷ ವಯಸ್ಸಿನ ಈ ವ್ಯಕ್ತಿ ಬರೋಬ್ಬರಿ 550 ಅನಾಥ ಶವಗಳಿಗೆ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಮಾನವೀಯತೆಯಿಂದ ಅವರು ಹಲವಾರು ವರ್ಷಗಳಿಂದ ಈ ಸೇವಾಕಾರ್ಯವನ್ನು ಮಾಡಿಕೊಂಡು ಬರುತ್ತಿದ್ದಾರೆ. ಅಹಮದಾಬಾದ್ ನಿವಾಸಿಯಾಗಿರುವ ಮಿತಲಾಲ್ ಸಿಂಧಿ ಅವರು, 60 ವರ್ಷಗಳಿಂದ ಫುಟ್ ಪಾತ್ ವ್ಯಾಪಾರ ಮಾಡುತ್ತಿದ್ದಾರೆ. ವಾರಸುದಾರರಿಲ್ಲದ ಅನಾಥ ಶವಗಳಿಗೆ ಬಂಧುವಾಗಿ ಅಂತ್ಯಸಂಸ್ಕಾರ ನೆರವೇರಿಸಿಕೊಂಡು ಬರುತ್ತಿದ್ದಾರೆ.

ಮಿತಲಾಲ್ ಸಿಂಧಿ ಅವರಿಗೆ 15 ವರ್ಷ ವಯಸ್ಸಾಗಿದ್ದ ಸಂದರ್ಭದಲ್ಲಿ ಭಾರತ ವಿಭಜನೆಯಾಯಿತು. ಆಗ ಅವರು ಪಾಕಿಸ್ತಾನದಿಂದ ಭಾರತಕ್ಕೆ ಬಂದರು. ಕಾರಣಾಂತರದಿಂದ ಕುಟುಂಬದವರಿಂದ ಮಿತಲಾಲ್ ದೂರವಾಗಿದ್ದರು.

ಸ್ವಂತ ತಂದೆಯ ಅಂತ್ಯಸಂಸ್ಕಾರ ನೆರವೇರಿಸಲು ಅವರಿಗೆ ಸಾಧ್ಯವಾಗಲಿಲ್ಲ. ಹಾಗಾಗಿ, ಅನಾಥ ಶವಗಳನ್ನೇ ತಮ್ಮ ತಾಯಿ, ಸಹೋದರಿ, ಸಹೋದರ, ಬಂಧುಗಳೆಂದು ಭಾವಿಸಿ ಅಂತ್ಯಸಂಸ್ಕಾರ ಮಾಡುತ್ತಿದ್ದಾರೆ. ಪ್ರತಿ ಶವ ಸಂಸ್ಕಾರಕ್ಕೆ 1500 ರೂ.ಗಿಂತ ಹೆಚ್ಚಿನ ಹಣ ಬೇಕಿದ್ದು, ಇದನ್ನು ಅವರೇ ಭರಿಸುತ್ತಾರೆ. ಇದುವರೆಗೆ 550 ಅನಾಥ ಶವಗಳ ಅಂತಿಮ ಸಂಸ್ಕಾರ ನೆರವೇರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...