alex Certify
ಕನ್ನಡ ದುನಿಯಾ       Mobile App
       

Kannada Duniya

OMG! ಈ ಮಹಿಳೆಯ ಮನೆಯಲ್ಲಿವೆ 400 ಕ್ಕೂ ಅಧಿಕ ಬಾವಲಿಗಳು…!

ಕೇರಳದಲ್ಲಿ ಕಾಣಿಸಿಕೊಂಡಿರುವ ನಿಫಾ ವೈರಸ್ ಈಗಾಗಲೇ ಹತ್ತಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿದೆ. ಈ ವೈರಸ್ ಸೋಂಕು ಹರಡದಂತೆ ತಡೆಗಟ್ಟಲು ಕೇರಳ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ದೇಶದ ಹಲವು ಭಾಗಗಳಲ್ಲಿ ಸೋಂಕು ಹಬ್ಬುವ ಭೀತಿ ವ್ಯಕ್ತವಾಗಿದೆ.

ಪ್ರಾಣಿಗಳು ಕಚ್ಚಿದ ಹಣ್ಣಿನಿಂದ ನಿಫಾ ವೈರಸ್ ಸೋಂಕು ಹರಡುತ್ತದೆ ಎನ್ನಲಾಗಿದ್ದು, ಅದರಲ್ಲೂ ಬಾವಲಿಗಳೇ ಈ ಸೋಂಕಿಗೆ ಕಾರಣವೆಂದು ಹೇಳಲಾಗುತ್ತಿದೆ. ಹೀಗಾಗಿ ಸಾರ್ವಜನಿಕರು ಬಾವಲಿಗಳನ್ನು ಕಂಡರೇನೆ ಬೆಚ್ಚಿ ಬೀಳುತ್ತಿದ್ದಾರೆ.

ಈ ಮಧ್ಯೆ ಗುಜರಾತಿನ ಅಹಮದಾಬಾದ್ ಸಮೀಪದ ರಾಜ್ಪುರ್ ಗ್ರಾಮದ 74 ವರ್ಷದ ಮಹಿಳೆಯೊಬ್ಬಳು ಕಳೆದ ಹಲವು ವರ್ಷಗಳಿಂದ ನಾನೂರಕ್ಕೂ ಅಧಿಕ ಬಾವಲಿಗಳ ಮಧ್ಯೆ ವಾಸ ಮಾಡುತ್ತಿರುವ ಅಚ್ಚರಿಯ ಪ್ರಕರಣ ಬೆಳಕಿಗೆ ಬಂದಿದೆ. ಶಾಂತಾ ಬೆನ್ ಪ್ರಜಾಪತಿ ಎಂಬ ಈ ಮಹಿಳೆ ಎರಡು ಕೊಠಡಿಯ ಮನೆಯಲ್ಲಿ ವಾಸಿಸುತ್ತಿದ್ದು, ಇದೇ ಮನೆಯಲ್ಲಿ ಹಲವು ವರ್ಷಗಳಿಂದ ನೂರಾರು ಬಾವಲಿಗಳು ಬೀಡುಬಿಟ್ಟಿವೆ.

ಬಹು ವರ್ಷಗಳ ಹಿಂದೆಯೇ ಪತಿಯನ್ನು ಕಳೆದುಕೊಂಡಿರುವ ಈ ಮಹಿಳೆ, ಕಡು ಕಷ್ಟದಲ್ಲಿಯೇ ಮೂವರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿಕೊಟ್ಟಿದ್ದಾರೆ. ಈಗ ಒಬ್ಬಂಟಿಯಾಗಿ ವಾಸಿಸುತ್ತಿರುವ ಶಾಂತಾ ಬೆನ್ ಪ್ರಜಾಪತಿಗೆ ಬಾವಲಿಗಳೇ ಸಾಥ್ ನೀಡುತ್ತಿವೆ. ನಿಫಾ ವೈರಸ್ ಪ್ರಕರಣದ ಬಳಿಕ ಗ್ರಾಮದ ಹಲವರು ಬಾವಲಿಗಳನ್ನು ಹೊರ ಕಳುಹಿಸುವಂತೆ ಹೇಳುತ್ತಿದ್ದರೂ ಶಾಂತಾ ಬೆನ್ ಮಾತ್ರ ಸುತಾರಾಂ ಒಪ್ಪುತ್ತಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...