alex Certify
ಕನ್ನಡ ದುನಿಯಾ       Mobile App
       

Kannada Duniya

34 ಬಾರಿ ಹಾವು ಕಚ್ಚಿದ್ರೂ ಬದುಕಿದ್ದಾಳೆ ಯುವತಿ….

snake

ಹಿಮಾಚಲ ಪ್ರದೇಶದ ಯುವತಿ 18 ವರ್ಷದ ಮನೀಶಾ ವರ್ಮಾ ವೈದ್ಯ ಲೋಕಕ್ಕೊಂದು ಸವಾಲಾಗಿದ್ದಾಳೆ. ಕಳೆದ ಮೂರು ವರ್ಷಗಳಲ್ಲಿ 34 ಬಾರಿ ವಿಷಕಾರಿ ಹಾವುಗಳು ಕಡಿದರೂ ಆಕೆಗೆ ಏನೂ ಆಗಿಲ್ಲ, ಆರಾಮಾಗಿಯೇ ಇದ್ದಾಳೆ. ಒಂದೇ ದಿನ ಅವಳಿಗೆ ಮೂರ್ನಾಲ್ಕು ಬಾರಿ ಹಾವು ಕಡಿದಿದ್ದೂ ಇದೆಯಂತೆ.

ಮೊದಲ ಬಾರಿ ಮನೀಶಾಗೆ ಅವಳ ಗ್ರಾಮದ ಬಳಿಯ ನದಿಯಲ್ಲಿ ಹಾವು ಕಡಿದಿತ್ತಂತೆ. ಅದು ಬಿಳಿ ಬಣ್ಣದ ಹಾವು. ಅದಾದ ಮೇಲೆ ಮನೀಶಾಳನ್ನು ಕಂಡಾಗಲೆಲ್ಲ ಹಾವುಗಳು ಅವಳೆಡೆಗೆ ಆಕರ್ಷಿತವಾಗುತ್ತವೆ, ಕಚ್ಚುತ್ತವೆ.

ಆದ್ರೆ 34 ಬಾರಿ ಹಾವು ಕಡಿದರೂ ಮನೀಶಾ ಆರೋಗ್ಯವಾಗಿಯೇ ಇದ್ದಾಳೆ. ಮನೀಶಾಳಲ್ಲಿ ಯಾವುದೋ ದೈವೀ ಶಕ್ತಿ ಇದೆ ಅನ್ನೋದು ಗ್ರಾಮಸ್ಥರ ನಂಬಿಕೆ. ಮನೀಶಾಳ ತಂದೆ, ಆಕೆಯನ್ನು ಮಾಂತ್ರಿಕರ ಬಳಿ, ಪೂಜಾರಿಗಳ ಬಳಿ ಕರೆದೊಯ್ದಿದ್ದಾರೆ, ಕಂಡ ಕಂಡ ದೇವಾಲಯವನ್ನೆಲ್ಲ ಸುತ್ತಿದ್ದಾರೆ. ವೈದ್ಯರ ಪಾಲಿಗೂ ಇದೊಂದು ಬಿಡಿಸಲಾಗದ ಒಗಟು. ಬಹುಷಃ ವಿಷಯುಕ್ತವಲ್ಲದ ಹಾವುಗಳು ಮನೀಶಾಗೆ ಕಚ್ಚಿರಬೇಕು ಎನ್ನುತ್ತಾರೆ ಅರಣ್ಯಾಧಿಕಾರಿಗಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...