alex Certify
ಕನ್ನಡ ದುನಿಯಾ       Mobile App
       

Kannada Duniya

10 ವರ್ಷದವಳಾಗಿದ್ದಾಗ ಹತ್ತನೇ ತರಗತಿ ಪಾಸ್ ಮಾಡಿದ್ದಾಕೆ 16 ನೇ ವಯಸ್ಸಿಗೇ ಇಂಜಿನಿಯರ್

ಕೆಲವು ಮಕ್ಕಳು ತಮ್ಮ ಬಾಲ್ಯಾವಸ್ಥೆಯಲ್ಲೇ ಅಸಾಧಾರಣ ಪ್ರತಿಭೆ ಹೊಂದಿರುತ್ತಾರೆ. ಇದನ್ನು ಗುರುತಿಸುವ ಮೂಲಕ ಅವರುಗಳನ್ನು ಪ್ರೋತ್ಸಾಹಿಸಿದರೆ ಅತ್ಯುನ್ನತವಾದದ್ದನ್ನು ಸಾಧಿಸುತ್ತಾರೆ. ಇದಕ್ಕೆ ತೆಲಂಗಾಣದ 16 ವರ್ಷದ ಈ ಬಾಲಕಿಯೇ ಸಾಕ್ಷಿ.

ತೆಲಂಗಾಣದ ಕಾಸಿಬಟ್ಟ ಸಂಹಿತಾ ಕೇವಲ ಮೂರು ವರ್ಷದವಳಿದ್ದಾಗಲೇ ವಿವಿಧ ದೇಶಗಳ ರಾಜಧಾನಿಯ ಹೆಸರನ್ನು ತನ್ನ ತೊದಲು ನುಡಿಯಲ್ಲಿ ಹೇಳುವ ಮೂಲಕ ಪೋಷಕರಲ್ಲಿ ಅಚ್ಚರಿ ಮೂಡಿಸಿದ್ದಳು. ಪೋಷಕರು ಕೂಡ ಆಕೆಯ ಪ್ರತಿಭೆಗೆ ನೀರೆರೆದಿದ್ದರು.

ಸಂಬಂಧಪಟ್ಟವರ ಅನುಮತಿ ಮೇರೆಗೆ ತನ್ನ ಹತ್ತನೇ ವಯಸ್ಸಿನಲ್ಲಿ 10ನೇ ತರಗತಿ ಪರೀಕ್ಷೆ ಬರೆದಿದ್ದ ಸಂಹಿತಾ, ಉತ್ತಮ ಅಂಕ ಪಡೆದಿದ್ದಳು. ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ಶೇ. 89 ಅಂಕ ಬಂದಿತ್ತು. ಈಗ ಹದಿನಾರು ವರ್ಷದವಳಾಗಿರುವ ಸಂಹಿತಾ, ವಿಶೇಷ ಅನುಮತಿ ಪಡೆದು ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದಿದ್ದಾಳೆ. ಆ ಮೂಲಕ ತೆಲಂಗಾಣದ ಅತಿ ಕಿರಿಯ ಇಂಜಿನಿಯರ್ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...