alex Certify
ಕನ್ನಡ ದುನಿಯಾ       Mobile App
       

Kannada Duniya

ಜೈಲಿನಲ್ಲಿದ್ದುಕೊಂಡೇ ಸಂತ್ರಸ್ತರಿಗೆ ನೆರವಾಗುತ್ತಿದ್ದಾರೆ ಖೈದಿಗಳು

ತಿರುವನಂತಪುರಂ: ಇಲ್ಲಿನ ಕೇಂದ್ರ ಕಾರಾಗೃಹದ ಖೈದಿಗಳು ಕಳೆದೊಂದು ವಾರದಿಂದ ಬ್ಯುಸಿಯಾಗಿದ್ದರೆ. ಜೈಲಿನಲ್ಲಿ ಅದೆಂಥಾ ಬ್ಯುಸಿ ಎಂದಿರಾ? ಅವರು ಜೈಲಿನಲ್ಲಿದ್ದುಕೊಂಡೇ ಕೇರಳ ನೆರೆ ಸಂತ್ರಸ್ತರಿಗೆ ನೆರವಾಗುತ್ತಿದ್ದಾರೆ.

ಜೈಲು ಅಧಿಕಾರಿಗಳ ಮಾಹಿತಿ ಪ್ರಕಾರ ಕಳೆದ ಒಂದು ವಾರದಲ್ಲಿ ಕೈದಿಗಳು 40 ಸಾವಿರಕ್ಕಿಂತ ಹೆಚ್ಚು ಚಪಾತಿಯನ್ನು ಸಿದ್ಧಪಡಿಸಿ ಸಂತ್ರಸ್ತರಿಗೆ ಕಳುಹಿಸಿಕೊಟ್ಟಿದ್ದಾರೆ. ವಿಶೇಷವೆಂದರೆ ಪೂಜಾಪುರದಲ್ಲಿರುವ ಕಾರಾಗೃಹವು ಸ್ವಾತಂತ್ರ್ಯ ಬ್ರಾಂಡ್ ನಲ್ಲಿ ಚಪಾತಿ, ಕರಿ ಸೇರಿ ವಿವಿಧ ಆಹಾರವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದು, ಸಾಕಷ್ಟು ಹೆಸರು ಮಾಡಿದೆ.

ನೆರೆ ಸಂತ್ರಸ್ತರಿಗೆ ನೆರವಾಗಲು ಈ ಕಾರಾಗೃಹದ ಐವತ್ತು ಖೈದಿಗಳು ದಿನದ 24 ಗಂಟೆ ಪಾಳಿಯಲ್ಲಿ ಕಾರ್ಯ ನಿರ್ವಹಿಸಿ ಚಪಾತಿ ಸಿದ್ಧಪಡಿಸಿ, ಅದನ್ನು ಪ್ಯಾಕ್ ಮಾಡಿ ಕಳುಹಿಸುತ್ತಿದ್ದಾರೆ. ಅದನ್ನು ಜಿಲ್ಲಾ ಆಡಳಿತಕ್ಕೆ ತಲುಪಿಸುತ್ತಿದ್ದು, ಜಿಲ್ಲಾಡಳಿತಗಳು ಅಗತ್ಯವಿರುವ ಕಡೆ ವಿತರಣೆ ನಡೆಸುತ್ತಿದೆ.

ಪ್ರಮುಖವಾಗಿ ಈ ಚಪಾತಿ ಪ್ಯಾಕ್ ಗಳನ್ನು ಏರ್ ಡ್ರಾಪ್ ಮೂಲಕ ವಿತರಿಸುವ ಕಡೆ ಬಳಸಲಾಗುತ್ತಿದೆ. ಚಪಾತಿ ಜತೆ ನೀರಿನ ಬಾಟಲ್, ಜ್ಯಾಮ್ ಸಹ ಕಳಿಸಲಾಗುತ್ತಿದೆ. ಸಂತ್ರಸ್ತರನ್ನು ರಕ್ಷಿಸುವ ಕಾರ್ಯಾಚರಣೆ ಕೊನೆ ಹಂತ ತಲುಪಿದ್ದು ಆಹಾರ ಬೇಡಿಕೆ ಕಡಿಮೆ ಆಗಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ತಮಿಳುನಾಡಿನಲ್ಲಿ ಈ ಹಿಂದೆ ನಡೆದಿದ್ದ ಪ್ರಕೃತಿ ವಿಕೋಪ ಸಂದರ್ಭದಲ್ಲಿಯೂ ಇದೇ ಜೈಲಿನಿಂದ ಆಹಾರ ರವಾನೆಯಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...