alex Certify
ಕನ್ನಡ ದುನಿಯಾ       Mobile App
       

Kannada Duniya

ಕಳ್ಳರ ಕೈಚಳಕ ಕಂಡು ದಂಗಾದ ಮಾಜಿ ಪೊಲೀಸ್ ಅಧಿಕಾರಿ

ಮಾಜಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಕಳ್ಳರ ಕೈಚಳಕಕ್ಕೆ ಬಲಿಪಶುವಾಗಿದ್ದಾರೆ. ದೆಹಲಿ ಮಾಜಿ ಪೊಲೀಸ್ ಕಮೀಷನರ್ ಬಿ.ಕೆ. ಗುಪ್ತಾ ತಮ್ಮ ಕಾರಿನಿಂದ ಕೆಲ ಕ್ಷಣದ ಮಟ್ಟಿಗೆ ಇಳಿದು ಹೋಗಿದ್ದು, ವಾಪಾಸ್ ಬಂದು ನೋಡಿದ ವೇಳೆ ಕಾರಿನಲ್ಲಿದ್ದ ಬೆಲೆ ಬಾಳುವ ವಸ್ತುಗಳು ನಾಪತ್ತೆಯಾಗಿರುವುದನ್ನು ಕಂಡು ದಂಗಾಗಿದ್ದಾರೆ.

ದೆಹಲಿಯ ಗ್ರೇಟರ್ ಕೈಲಾಶ್ ನಿವಾಸಿಯಾಗಿರುವ ಬಿ.ಕೆ. ಗುಪ್ತಾ ಶನಿವಾರದಂದು ಚಂಢೀಗಡದಲ್ಲಿ ನಡೆಯುತ್ತಿರುವ ಗಾಲ್ಫ್ ಟೂರ್ನಮೆಂಟ್ ಗಾಗಿ ಸ್ನೇಹಿತರೊಂದಿಗೆ ಹೊರಟಿದ್ದರೆನ್ನಲಾಗಿದೆ. ಮಾರ್ಗ ಮಧ್ಯೆ ತಮ್ಮ ಚಾಲಕನಿಗೆ ಕಾರು ನಿಲ್ಲಿಸಲು ಹೇಳಿದ ಗುಪ್ತಾ ಕೆಳಗಿಳಿದಿದ್ದಾರೆ. ಚಾಲಕ ಮತ್ತೊಂದು ವಾಹನಕ್ಕೆ ಲಗೇಜ್ ತೆಗೆದುಕೊಂಡು ಹೋಗಿದ್ದು, ವಾಪಾಸ್ ಬಂದ ವೇಳೆ ಕಾರಿನಲ್ಲಿದ್ದ ಐಪ್ಯಾಡ್, ಹಣ ಹಾಗೂ ಬೆಲೆ ಬಾಳುವ ವಸ್ತುಗಳು ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ.

ಕೆಲ ಕ್ಷಣಗಳಲ್ಲೇ ಕಳ್ಳರು ತಮ್ಮ ಕರಾಮತ್ತು ತೋರಿಸಿದ್ದು, ಇದೀಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸನಿಹದಲ್ಲಿ ಯಾವುದೇ ಸಿಸಿ ಟಿವಿ ಅಳವಡಿಸಿಲ್ಲವೆನ್ನಲಾಗಿದ್ದು, ಪೊಲೀಸರು ಮಾಹಿತಿದಾರರ ನೆರವಿನಿಂದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...