alex Certify
ಕನ್ನಡ ದುನಿಯಾ       Mobile App
       

Kannada Duniya

ಶೌಚಾಲಯದಲ್ಲಿದ್ದ ಲೋಟಗಳನ್ನೂ ಬಿಡುತ್ತಿಲ್ಲ ಕಳ್ಳರು

raiwlay_1483532531

ಇದನ್ನು ಕೇಳಿದ್ರೆ ನಿಮಗೆ ಹಾಸ್ಯಾಸ್ಪದ ಎನಿಸಬಹುದು, ಆದ್ರೀದು ಸತ್ಯ. ಕಳೆದ ಮೂರು ತಿಂಗಳಲ್ಲಿ ಕಳ್ಳರು ರೈಲಿನ ಶೌಚಾಲಯದಲ್ಲಿದ್ದ 1100 ಲೋಟಗಳನ್ನು ಕದ್ದಿದ್ದಾರೆ.

ಜಬಲ್ಪುರ ವಿಭಾಗದ ವೆಸ್ಟರ್ನ್ ಸೆಂಟ್ರಲ್ ರೈಲ್ವೆಯಲ್ಲಿ ಈ ಕಳ್ಳತನ ನಡೆದಿದೆ. ರೈಲಿನ ಶೌಚಾಲಯದಲ್ಲೆಲ್ಲ ಚೈನ್ ಒಂದರಲ್ಲಿ ಭದ್ರಪಡಿಸಿ ಲೋಟಗಳನ್ನು ಇಡಲಾಗಿತ್ತು. ಆದ್ರೂ ಲೋಟಗಳೆಲ್ಲ ಕಳ್ಳರ ಪಾಲಾಗಿದೆ.

ಮೊದಲು ಇಂತಹ ಲೋಟಗಳನ್ನು ಎಸಿ ಬೋಗಿಯ ಬಾತ್ ರೂಮ್ ಗಳಿಗೆ ಮಾತ್ರ ನೀಡಲಾಗುತ್ತಿತ್ತು. ಇತ್ತೀಚೆಗಷ್ಟೆ ಎಲ್ಲಾ ಕಂಪಾರ್ಟ್ ಮೆಂಟ್ ನ ಟಾಯ್ಲೆಟ್ ಗಳಲ್ಲೂ ಲೋಟವನ್ನು ಇಡಲಾಗಿತ್ತು. ಆದ್ರೆ ಕಳ್ಳರು ಶೌಚಾಲಯದಲ್ಲಿದ್ದ ಲೋಟಗಳನ್ನೂ ಬಿಟ್ಟಿಲ್ಲ.

ಜಬಲ್ಪುರದಿಂದ ದೆಹಲಿಗೆ ಸಾಗುವ ರೈಲಿನಲ್ಲಿ 36 ಗಂಟೆಗಳಲ್ಲಿ ಒಟ್ಟು 60 ಹೊಸ ಮಗ್ ಗಳು ಕಳ್ಳರ ಪಾಲಾಗಿವೆ. ಸೀಲಿಂಗ್ ಲೈಟ್ ಗಳು, ಕರ್ಟನ್, ಬ್ಲಾಂಕೆಟ್ ಎಲ್ಲವನ್ನೂ ಕದ್ದುಕೊಂಡು ಹೋಗೋದು ಮಾಮೂಲು. ಆದ್ರೆ ಟಾಯ್ಲೆಟ್ ಮಗ್ ಕೂಡ ಕಳ್ಳರ ಫೇವರಿಟ್ ಅನ್ನೋದು ಈಗ ಸಾಬೀತಾಗಿದೆ. ಇದುವರೆಗೆ ಈ ಮಾರ್ಗದ ರೈಲಿನಲ್ಲಿ ಇಡಲಾಗಿದ್ದ 1800 ಲೋಟಗಳ ಪೈಕಿ 1100 ಲೋಟಗಳು ಗಾಯಬ್ ಆಗಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...