alex Certify
ಕನ್ನಡ ದುನಿಯಾ       Mobile App
       

Kannada Duniya

ಕೋಣ ಕದಿಯಲು ಬಂದವರು ನೀರು ಪಾಲಾದರು

Thieves drown in Chambal river as stolen buffalo swims to safetyಕೋಣಗಳನ್ನು ಕದ್ದಿದ್ದ ಇಬ್ಬರು ಕಳ್ಳರು ಮಾರ್ಗ ಮಧ್ಯದಲ್ಲಿ ಈಜಿಕೊಂಡು ನದಿ ದಾಟುವ ವೇಳೆ ನೀರು ಪಾಲಾಗಿದ್ದರೆ ಕೋಣಗಳು ಮಾತ್ರ ಸುರಕ್ಷಿತವಾಗಿ ದಡ ಸೇರಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.

ರಾಜಸ್ಥಾನ ಮತ್ತು ಮಧ್ಯ ಪ್ರದೇಶದ ಗಡಿ ಭಾಗವಾದ ಧೋಲಾಪುರ ದಿಹೌಲಿ ಏರಿಯಾದಲ್ಲಿ ಸೆಪ್ಟೆಂಬರ್ 23 ರಂದು ಕೋಣಗಳನ್ನು ಕಳವು ಮಾಡಲಾಗಿದ್ದು, ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಕೋಣಗಳು ಸೋಮವಾರದಂದು ಕೋತಾಲ ಗ್ರಾಮದಲ್ಲಿ ಪತ್ತೆಯಾಗಿದ್ದವು. ಅವುಗಳ ಕೊಂಬಿಗೆ ಎರಡು ಮೊಬೈಲ್ ಗಳು, ಎರಡು ಜೊತೆ ಬಟ್ಟೆ ಹಾಗೂ ಷೂ ಗಳನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಸುತ್ತಿ ಕಟ್ಟಲಾಗಿತ್ತು. ಕೋಣಗಳನ್ನು ಕದ್ದ ಕಳ್ಳರು, ಚಂಬಲ್ ನದಿಯನ್ನು ಈಜಿಕೊಂಡು ಹೋಗುವ ವೇಳೆ ಮುಳುಗಿರಬಹುದೆಂದು ಶಂಕಿಸಲಾಗಿದ್ದು, ಕೋಣಗಳು ಈಜಿ ದಡ ಸೇರಿವೆ. ಕೋಣಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಅವುಗಳನ್ನು ಮಾಲೀಕನಿಗೆ ಒಪ್ಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...