alex Certify
ಕನ್ನಡ ದುನಿಯಾ       Mobile App
       

Kannada Duniya

ಚಿನ್ನದ ಟಿಫಿನ್ ಬಾಕ್ಸ್ ಕದ್ದವನು ಮಾಡಿದ್ದೇನು ಗೊತ್ತಾ?

ಹೈದರಾಬಾದ್‌: ಚಿನ್ನದ ತಟ್ಟೆಯಲ್ಲಿ ಉಂಡರೆ, ಆರೋಗ್ಯಕ್ಕೆ ಉತ್ತಮ ಎಂಬುದು ಇತಿಹಾಸದಲ್ಲಿ ಕೇಳಿರುವ ಮಾತುಗಳು. ರಾಜಾಳ್ವಿಕೆ ಕಾಲದಲ್ಲಿ ಅರಸರೆಲ್ಲ ಚಿನ್ನದ ತಟ್ಟೆ, ಬೆಳ್ಳಿ ಲೋಟದಲ್ಲಿ ಆಹಾರ ತೆಗೆದುಕೊಳ್ಳುತ್ತಿದ್ದರೆಂಬುದು ಇತಿಹಾಸದಲ್ಲಿ ಕೇಳಬಹುದು. ಹೈದರಾಬಾದ್‌ನಲ್ಲಿ ಕಳ್ಳರಿಬ್ಬರು ಏನು ಮಾಡಿದ್ದಾರೆ ಗೊತ್ತಾ? ಮುಂದೆ ಓದಿ.

ನಿಜಾಮ್‌ ಮ್ಯೂಸಿಯಂನಿಂದ ಕದ್ದ ಚಿನ್ನದ ಟಿಫಿನ್ ಬಾಕ್ಸ್ ನ್ನು ಕಳ್ಳರು ಊಟ ಮಾಡಲು ಬಳಸಿದ್ದಾರೆ. ಹವಳ, ಮುತ್ತು ರತ್ನ, ವಜ್ರಗಳನ್ನು ಅಳವಡಿಸಿರುವ, ಕೋಟಿಗಟ್ಟಲೆ ಬೆಲೆ ಬಾಳುವ 4 ಕೆಜಿ ತೂಕದ ಚಿನ್ನದ ಟಿಫಿನ್ ಬಾಕ್ಸ್ ನಲ್ಲಿ ಕಳ್ಳರು ಊಟ ಮಾಡಿದ್ದಾರೆ ಎಂಬುದು ಬಂಧಿತರ ವಿಚಾರಣೆ ವೇಳೆ ತಿಳಿದುಬಂದಿದೆ.

ಪುರಾನಿ ಹವೇಲಿ ಮ್ಯೂಸಿಯಂಗೆ ಸೆ.2 ರಂದು ನುಗ್ಗಿದ್ದ ಇಬ್ಬರು ಕಳ್ಳರು, ಟಿಫಿನ್‌ ಬಾಕ್ಸ್‌ ಹಾಗೂ ಚಿನ್ನದ ಲೋಟ, ತಟ್ಟೆ, ಚಮಚಗಳನ್ನು ಎಗರಿಸಿದ್ದರು. ಇವುಗಳ ಒಟ್ಟು ಮೊತ್ತ 1 ಕೋಟಿಗೂ ಅಧಿಕ. ಪ್ರಾಚೀನ ವಸ್ತುಗಳಾಗಿದ್ದರಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚು ಮೌಲ್ಯಯುತವಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಚಿನ್ನದಿಂದ ಮುಚ್ಚಲ್ಪಟ್ಟಿದ್ದ ಪವಿತ್ರ ಗ್ರಂಥ ಕುರಾನ್‌ನನ್ನು ಕದಿಯಲು ಯತ್ನಿಸಿದ್ದಾರೆ. ಆ ವೇಳೆ ಪ್ರಾರ್ಥನೆಯ ಸದ್ದು ಕೇಳಿ ಭಯಭೀತಗೊಂಡಿದ್ದಾರೆ. ಹೀಗಾಗಿ ಕುರಾನ್‌ನನ್ನು ಅವರು ಮುಟ್ಟಿಲ್ಲ ಎಂದು ಹೈದರಾಬಾದ್‌ ಪೊಲೀಸ್‌ ಆಯುಕ್ತ ಅಂಜನಿ ಕುಮಾರ್‌ ಹೇಳಿದ್ದಾರೆ.

ಮ್ಯೂಸಿಯಂ ಬಳಿಯ ಸಿಸಿ ಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದ್ದು, ಬೈಕ್‌ನಲ್ಲಿ ಪರಾರಿಯಾಗುವುದು ಸೆರೆಯಾಗಿತ್ತು. ಬಳಿಕ ಕಳ್ಳರನ್ನು ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದು, ಓರ್ವ ಕೊಲೆ, ದರೋಡೆ ಕೇಸುಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಎಂದು ತಿಳಿದು ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...