alex Certify
ಕನ್ನಡ ದುನಿಯಾ       Mobile App
       

Kannada Duniya

ಐಷಾರಾಮಿ ಹವ್ಯಾಸಕ್ಕಾಗಿ ಈ ಕೆಲಸಕ್ಕಿಳಿದ ಇಂಡಿಯನ್ ಐಡಲ್ ಸ್ಪರ್ಧಿ

ಇಂಡಿಯನ್ ಐಡಲ್ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದ ಹಾಗೂ ಟೇಕ್ವಾಂಡೋದಲ್ಲಿ ಎರಡು ಬಾರಿ ಬಂಗಾರದ ಪದಕ ಗಳಿಸಿದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ನಿರರ್ಗಳವಾಗಿ ಇಂಗ್ಲೀಷ್ ಮಾತನಾಡಬಲ್ಲ ಈ ವ್ಯಕ್ತಿ ಐಷಾರಾಮಿ ಜೀವನದ ಆಸೆಗೆ ಕಳ್ಳತನ ಮಾಡುತ್ತಿದ್ದ ಎನ್ನಲಾಗಿದೆ.

ಆರೋಪಿ ಹೆಸರು ಸೂರಜ್ ಅಲಿಯಾಸ್ ಸೂರಜ್ ಫೈಟರ್. ದೆಹಲಿಯಲ್ಲಿ ನಡೆದ ಕಳ್ಳತನವೊಂದರ ದೂರಿನ ಮೇಲೆ ಸೂರಜ್ ನನ್ನು ಪೊಲೀಸರು ಬಂಧಿಸಿದ್ದಾರೆ. ಸೂರಜ್ ತನ್ನ ಸ್ನೇಹಿತನ ಜೊತೆ ಸೇರಿ ಕಳ್ಳತನ ಮಾಡ್ತಿದ್ದ ಎನ್ನಲಾಗಿದೆ. ಆತನ ವಿರುದ್ಧ ದೆಹಲಿಯಾದ್ಯಂತ ಸುಮಾರು 24 ಕಳ್ಳತನ ಪ್ರಕರಣ ದಾಖಲಾಗಿದೆ.

ಸೂರಜ್ ಮುಂಬೈ ನಿವಾಸಿಯಾಗಿದ್ದು, ವೃತ್ತಿಯಲ್ಲಿ ಕಂಪ್ಯೂಟರ್ ಇಂಜಿನಿಯರ್. ಸೂರಜ್ ತಂದೆ ಮುಂಬೈ ನ್ಯಾಯಾಲಯದಲ್ಲಿ ವಕೀಲರಾಗಿದ್ದಾರೆ. ಐಷಾರಾಮಿ ಬದುಕು ಹಾಗೂ ದುಬಾರಿ ಹವ್ಯಾಸಕ್ಕಾಗಿ ಆತ ಕಳ್ಳತನ ಶುರುಮಾಡಿದ್ದ ಎನ್ನಲಾಗಿದೆ. ಸೂರಜ್ ವಿಚಾರಣೆ ನಡೆಸುತ್ತಿರುವ ಪೊಲೀಸರು ಆತನ ಸ್ನೇಹಿತನ ಬಂಧನಕ್ಕೆ ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...