alex Certify
ಕನ್ನಡ ದುನಿಯಾ       Mobile App
       

Kannada Duniya

ಮಾತಾಡೋಕೆ ರಾಹುಲ್ ಗಾಂಧಿಗೆ ಅವಕಾಶ ನೀಡ್ತಿಲ್ವಂತೆ

rahul-gandhi_650x400_61456298874

ಮೋದಿ ಸರ್ಕಾರದ ವಿರುದ್ದ ಸದಾ ಕಿಡಿ ಕಾರುತ್ತಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಇದೀಗ ತಾವು ಸಂಸತ್‌ ‌‌ನಲ್ಲಿ ಮಾತನಾಡಲು ಸಿದ್ಧನಿದ್ದು, ಆದರೆ ನನ್ನ ಕುರಿತಾಗಿ ಹೆದರಿಕೆ ಹೊಂದಿರುವ ಕೇಂದ್ರ ಸರ್ಕಾರ ನನಗೆ ಸಂಸತ್‌‌ ನಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಸತ್ತಿನಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದ ಕುರಿತಾಗಿ ಮಾತನಾಡಿದ ರಾಹುಲ್‌, ಜೆಎನ್‌‌ಯು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಲು ನಾವು ಸಿದ್ಧರಿದ್ದು, ಆದರೆ ಸರ್ಕಾರಕ್ಕೆ ನನ್ನ ಕುರಿತಾಗಿ ಭಯವಿದೆ. ಹಾಗಾಗಿ ಸಂಸತ್ತಿನಲ್ಲಿ ಮಾತನಾಡಲು ನನಗೆ ಅವಕಾಶ ನೀಡುತ್ತಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ ಒಂದೊಮ್ಮೆ ಅವಕಾಶ ನೀಡಿದಲ್ಲಿ ತಾವು ಈ ಕುರಿತಾಗಿ ಮಾತನಾಡಲಿದ್ದು, ಸರ್ಕಾರದ ದಮನ ನೀತಿಯ ಕುರಿತು ಪ್ರಶ್ನಿಸಲಿದ್ದೇನೆ ಎಂದು ವಿವರಿಸಿದರು.

ಈಗಾಗಲೇ ಅಧಿವೇಶನದಲ್ಲಿ ಹೈದರಾಬಾದ್‌ ವಿಶ್ವವಿದ್ಯಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ದಲಿತ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣ ಭಾರೀ ಕೋಲಾಹಲವನ್ನುಂಟು ಮಾಡಿದ್ದು, ಇದೀಗ ಜೆಎನ್‌‌ಯು ಪ್ರಕರಣವೂ ಸಹ ಸದ್ದು ಮಾಡುವ ಎಲ್ಲಾ ಸಾಧ್ಯತೆಗಳಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...